... ...
ಕರ್ನಾಟಕ ವಿಧಾನ ಪರಿಷತ್ತು: ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.

LATEST INFORMATION

ಸುತ್ತೋಲೆ: 27.04.2021, ಕೋವಿಡ್-19 ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಿರುವ ಬಗ್ಗೆ.

ಲಘು ಪ್ರಕಟಣೆ ಭಾಗ-2, ಮಂಗಳವಾರದಿನಾಂಕ : 27ನೇ ಏಪ್ರಿಲ್, 2021.
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು 2020-21ನೇ ಸಾಲಿನ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಈ ಲಘು ಪ್ರಕಟಣೆಯೊಂದಿಗೆ ಲಗತ್ತಿಸಲಾಗಿರುವ ನಮೂನೆಯಲ್ಲಿ (ಕನ್ನಡ ಮತ್ತು ಆಂಗ್ಲ) ದಿನಾಂಕ: 30ನೇ ಜೂನ್, 2021ರೊಳಗಾಗಿ ಲೋಕಾಯುಕ್ತಕ್ಕೆ ನೇರವಾಗಿ ಸಲ್ಲಿಸಬೇಕೆಂದು ಈ ಮೂಲಕ ಮಾನ್ಯ ಸದಸ್ಯರುಗಳ ಗಮನಕ್ಕೆ ತರಲಾಗಿದೆ.

ಕೋವಿಡ್-19 ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ವಿಧಾನ ಪರಿಷತ್ತಿನ ಸಚಿವಾಲಯವು ಕಾರ್ಯನಿರ್ವಹಿಸುವ ಕುರಿತು.

ಲಘು ಪ್ರಕಟಣೆ ಭಾಗ-2, ಗುರುವಾರ, ದಿನಾಂಕ : 22ನೇ ಏಪ್ರಿಲ್, 2021.
2021-22ನೇ ಸಾಲಿನಿಂದ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಆಪ್ತ ಸಹಾಯಕರುಗಳ ನೇಮಕಾತಿ/ಸೇವಾ ವಿಷಯ/ವೇತನ/ಮತ್ತಿತರ ಭತ್ಯೆಗಳನ್ನು ಸಚಿವಾಲಯದ ವತಿಯಿಂದ ನಿರ್ವಹಿಸುವ ಕುರಿತು.

ಸುತ್ತೋಲೆ: 21.04.2021, 2021-2022ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಚಿವಾಲಯದ ಅಧಿಕಾರಿ/ನೌಕರರ ಮತ್ತು ಪೀಠಾಸೀನಾಧಿಕಾರಿಗಳು ಹಾಗು ಸಂಸದೀಯ ಪದಾಧಿಕಾರಿಗಳ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ವೇತನದಿಂದ ಆದಾಯ ತೆರಿಗೆ ಕಟಾಯಿಸುವ ಬಗ್ಗೆ.

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 21ನೇ ಏಪ್ರಿಲ್, 2021.
ರಾಜ್ಯದಲ್ಲಿ ಕೊರೋನ ವೈರಸ್ (ಕೋವಿಡ್-19)ನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಆರೋಗ್ಯದ ಹಿತದೃಷ್ಠಿಯಿಂದ ಮುಂಜಾಗ್ರತಾಕ್ರಮವಾಗಿ ಸಮಿತಿ ಸಭೆಗಳನ್ನು ನಿಯಂತ್ರಿಸುವುದು ಸೂಕ್ತವೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಿಳಿಸಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ತಿನ ಸಮಿತಿ ಸಭೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ಮಾನ್ಯ ಸಭಾಪತಿಯವರು ತಿಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸಲಾಗಿದೆ.

ಬೆಂಗಳೂರು ಮಹಾನಗರದಲ್ಲಿ ಕೋವಿಡ್-‌19ರ ಅಲೆಯು ಈ ಹಿಂದಿಗಿಂತಲೂ ವೇಗವಾಗಿ ಹರಡುತ್ತಿರುವುದರಿಂದ ಸಮಿತಿಯು ಸಭೆಗಳನ್ನು ಮುಂದೂಡಿರುವ ಬಗ್ಗೆ.

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 03ನೇ ಏಪ್ರಿಲ್, 2021.
ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.04.2021 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸಲಾಗಿದೆ.