ಶಾಸಕರ ಭವನದ ಕುರಿತು ಸಂಕ್ಷಿಪ್ತ ಮಾಹಿತಿ
Contact details
ವಸತಿ ಸಮಿತಿಯ ಆಂತರಿಕ ಕಾರ್ಯವಿಧಾನ ನಿಯಮಗಳು
ಶಾಸಕರ ಭವನ ಕಟ್ಟಡದಲ್ಲಿ ಹಂಚಿಕೆ ಮಾಡಲಾಗಿರುವ ಕೊಠಡಿಗಳ ವಿವರ
ಶಾಸಕರ ಭವನದಲ್ಲಿ ಅತಿಥಿ ಕೊಠಡಿಗಳು ಮತ್ತು ಸಮ್ಮೇಳನ ಸಭಾಂಗಣದ ಬಾಡಿಗೆ ದರಗಳು ಹಾಗೂ ವಿಧಾನ ಪರಿಷತ್ತಿನ ಶಾಸಕರ ಭವನದ ವಾಹನಗಳ ಬಾಡಿಗೆ ದರ ಹಾಗೂ ನಿರೀಕ್ಷಣಾ ಶುಲ್ಕಗಳ ಬಗ್ಗೆ
|
ಸಂಕ್ಷಿಪ್ತ ಮಾಹಿತಿ
ವಸತಿ ಸೌಕರ್ಯ:
ಕರ್ನಾಟಕ ವಿಧಾನ ಮಂಡಲದ ಎಲ್ಲಾ ಗೌರವಾನ್ವಿತ ಸದಸ್ಯರ ವಾಸ್ತವ್ಯಕ್ಕಾಗಿ ಶಾಸಕರ ಭವನ-1, 2, 4, 5, ಕಟ್ಟಡಗಳಲ್ಲಿ ಬಾಡಿಗೆ ನಿಗಧಿಪಡಿಸಿ ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ಮಾಜಿ ಸದಸ್ಯರುಗಳಿಗೆ, ಸಂಸತ್ ಸದಸ್ಯರುಗಳಿಗೆ, ರಾಜ್ಯ ಸರ್ಕಾರದ ಅಧಿಕಾರಿ/ಇತರೆ ರಾಜ್ಯಗಳ ವಿಧಾನ ಮಂಡಲದ ಅಧಿಕಾರಿಗಳಿಗೆ ಪಾವತಿ ಆಧಾರದ ಮೇಲೆ ಅತಿಥಿ ಕೊಠಡಿಗಳನ್ನು ಒದಗಿಸಲಾಗುತ್ತಿದೆ.
ವಾಹನಗಳ ಸೌಲಭ್ಯ:
ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯರು ಹಾಗೂ ಮಾಜಿ ಸದಸ್ಯರ ಉಪಯೋಗಕ್ಕಾಗಿ ಇನ್ನೋವಾ, ಫಾಚ್ರ್ಯೂನರ್ ಮತ್ತು ಸ್ವಿಪ್ಟ್ ಡಿಸೈರ್ ವಾಹನಗಳನ್ನು ಬಾಡಿಗೆ ಹಾಗೂ ವೆಟಿಂಗ್ ಚಾರ್ಚ್ ಸೇರಿದಂತೆ ಪಾವತಿ ಆಧಾರದ ಮೇಲೆ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.
ಸಮ್ಮೇಳನ ಸಭಾಂಗಣ:
ಶಾಸಕರ ಭವನದ ಕಟ್ಟಡ-1ರ 3ನೆ ಮತ್ತು 4ನೇ ಮಹಡಿಯಲ್ಲಿ ಹಾಗೂ ಕಟ್ಟಡ-5ರ 3ನೇ ಮಹಡಿಯಲ್ಲಿ ಸಮ್ಮೇಳನ ಸಭಾಂಗಣಗಳಿದ್ದು, 150 ಆಸನಗಳ ವ್ಯವಸ್ಥೆಯಿರುತ್ತದೆ. ಇವುಗಳನ್ನು ವಿಧಾನ ಪರಿಷತ್ತಿನ ಸಮಿತಿಗಳಿಗೆ, ಸದನ ಸಮಿತಿಗಳಿಗೆ ಸಭೆ ನಡೆಸುವ ಸಲುವಾಗಿ ನೀಡಲಾಗುತ್ತಿದೆ.
ಔಷಧಾಲಯ:
ಶಾಸಕರ ಭವನದ ಆವರಣದಲ್ಲಿ ಅಲೋಪತಿ, ಹೋಮಿಯೋಪತಿ, ಯುನಾನಿ ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸಾಲಯಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿರುತ್ತದೆ. ಗೌರವಾನ್ವಿತ ಸದಸ್ಯರುಗಳಿಗೆ ಪ್ರಥಮಚಿಕಿತ್ಸೆ ನೀಡುವುದು. ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿ ಸರ್ಕಾರದಿಂದ ದೊರೆಯುವ ವಿವಿಧ ಔಷಧಿಗಳನ್ನು ನೀಡುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ಹೆಲ್ತ್ ಕ್ಲಬ್:
ವಿಧಾನ ಮಂಡಲದ ಸದಸ್ಯರುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸುಸಜ್ಜಿತವಾದ ಹೆಲ್ತ್ ಕ್ಲಬ್ ವಿಭಾಗವನ್ನು ಶಾಸಕರ ಭವನದ ಕಟ್ಟಡ-2ರ ನೆಲಮಹಡಿಯಲ್ಲಿ ಪ್ರಾರಂಭಿಸಲಾಗಿದ್ದು, ವಿಧಾನಸಭಾ ಸಚಿವಾಲಯದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಬೆಳಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಮತ್ತು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿರುತ್ತದೆ.
ವಾಚನಾಲಯ:
ವಿಧಾನ ಮಂಡಲದ ಸದಸ್ಯರು ಹಾಗೂ ಮಾಜಿ ಸದಸ್ಯರುಗಳ ಉಪಯೋಗಕ್ಕಾಗಿ ಶಾಸಕರ ಭವನ ಕಟ್ಟಡ-2ರಲ್ಲಿ ವಾಚನಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಕನ್ನಡ ಆಂಗ್ಲ, ಉರ್ದು, ತಮಿಳು ಹಾಗೂ ತೆಲುಗು ದಿನಪತ್ರಿಕಗೆಳು, ಕನ್ನಡ ಮತ್ತು ಆಂಗ್ಲ ಭಾಷೆಯ ವಾರ ಪತ್ರಿಕೆಗಳು ಹಾಗೂ ಮಾಸಿಕ ಪತ್ರಿಕೆಗಳು ಲಭ್ಯವಿರುತ್ತವೆ.
ಊಟೋಪಚಾರ ವ್ಯವಸ್ಥೆ:
ಸದಸ್ಯರುಗಳಿಗೆ ಉತ್ತರಕರ್ನಾಟಕ ಶೈಲಿಯರೊಟ್ಟಿ ಊಟ ಹಾಗೂ ವಿವಿಧ ಬಗೆಯ ಉಪಹಾರ/ಖಾದ್ಯಗಳು ಮತ್ತು ಸಿಹಿ ತಿನಿಸುಗಳು ಲಭ್ಯವಿರುವ ರೊಟ್ಟಿ ಖಾನಾವಳಿ ಮತ್ತು ಮೆ:ಸಮೃದ್ದಿ ಹೋಟೆಲ್ ಶಾಸಕರ ಭವನದಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇನ್ನಿತರೆ ಸೌಲಭ್ಯಗಳು:
ಬ್ಯಾಂಕಿನ ಸೇವೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಎ.ಟಿ.ಎಂ. ಸೌಲಭ್ಯಗಳು, ಅಂಚೆ ಸೇವೆಗಾಗಿ ಅಂಚೆ ಕಚೇರಿ, ರೈಲ್ವೆ ಮತ್ತು ಬಸ್ ಟಿಕೆಟ್ ಕಾಯ್ದಿರಿಸುವ ಸಲುವಾಗಿ ಕೆ.ಎಸ್. ಆರ್.ಟಿ.ಸಿ.ಕೌಂಟರ್ ಮತ್ತು ಸೌತ್ ವೆಸ್ಟ್ರನ್ ರೈಲ್ವೆ ಕೌಂಟರ್ ವ್ಯವಸ್ಥೆ ಇರುತ್ತದೆ.ಸದಸ್ಯರು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಹಾಪ್‍ಕಾಮ್ಸ್ ಹಣ್ಣಿನ ಅಂಗಡಿ, ನಂದಿನಿ ಹಾಲಿನ ಡೈರಿ, ಖಾದಿ ಭಂಡಾರ, ಸ್ಟೇಷನರಿ ಅಂಗಡಿ, ಲಾಂಡ್ರಿ, ಮೆಡಿಕಲ್ ಸ್ಟೋರ್, ಸಲೂನ್, ಜೆರಾಕ್ಸ್, ಮೊಬೈಲ್ ರಿಚಾರ್ಜ್ ಸೌಲಭ್ಯವು ಸಹ ಇರುತ್ತದೆ.
ಭದ್ರತಾ ವ್ಯವಸ್ಥೆ:
ಶಾಸಕರ ಭವನದಲ್ಲಿ ವಾಸ್ತವ್ಯವಿರುವ ಮಾನ್ಯ ಸದಸ್ಯರ ಭದ್ರತೆಯ ದೃಷ್ಟಿಯಿಂದ ಶಾಸಕರ ಭವನ-1ರ ಆವರಣದಲ್ಲಿ ಪೊಲೀಸ್ ಉಪ ಆರಕ್ಷಕ ಠಾಣೆಯ ವ್ಯವಸ್ಥೆ ಮಾಡಲಾಗಿರುತ್ತದೆ ಹಾಗೂ ಚಲನವಲನಗಳ ವೀಕ್ಷಣೆಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ.
|
|