ರಚನೆ

ಕಾರ್ಯಗಳು ಮತ್ತು ಕರ್ತವ್ಯಗಳು

ಇತರೆ ವಿವರಗಳು

ಶಾಸನ ರಚನಾ ಶಾಖೆಯ ಕಾರ್ಯಗಳ ವಿವರಗಳು
(ಸೂಚನಾ ಪತ್ರ ಶಾಖೆ ಹೊಂದಿಕೊಂಡಂತೆ)

1. ಸದನದ ಪ್ರಾರಂಭ ಹಾಗೂ ಮುಂದೂಡಿಕೆ ಅಧಿಸೂಚನೆ ಹೊರಡಿಸುವುದು
2. ಪರಿಷತ್ತಿನ ಕಾರ್ಯಕಲಾಪಗಳ ಪಟ್ಟಿ ತಯಾರಿಸುವುದು
3. ಅಧಿವೇಶನ ನಡವಳಿಯ ಸಂಕ್ಷಿಪ್ತ ವರದಿ ಮತ್ತು ಸಾರಾಂಶ ತಯಾರಿಸುವುದು.
4. ಸಂತಾಪ ಸೂಚನೆಗಳು/ಅಭಿನಂದನಾ ಪ್ರಸ್ತಾವಗಳು/ನಿಯಮ 68ರಡಿಯಲ್ಲಿ ಬರುವ
ಪ್ರಸ್ತಾವನೆಗಳು
5. ವಿಧಾನ ಪರಿಷತ್ತಿನ ವಿವಿಧ ಸಮಿತಿಗಳಿಗೆ ಸದಸ್ಯರುಗಳನ್ನು ಚುನಾಯಿಸುವುದು
6. ಹಕ್ಕುಬಾಧ್ಯತಾ ಸಮಿತಿ ಕಾರ್ಯನಿರ್ವಹಿಸುವುದು.
7. ಜಂಟಿ ಸದನ ಸಮಿತಿಗಳು/ಸದನ ಸಮಿತಿಗಳ ಕರ್ತವ್ಯ
8. ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಪ್ರಸ್ತಾವದ ಮಂಡಿಸುವುದು
9. ಸದಸ್ಯರ ಗೈರುಹಾಜರಾತಿಗೆ ಸದನದ ಅನುಮತಿ ಪಡೆಯುವುದು.
10. ಸಂಸದೀಯ ಪದಾಧಿಕಾರಿಗಳು/ಕಾರ್ಯದರ್ಶಿಗಳ ಸಮ್ಮೇಳನದ ಕರ್ತವ್ಯಗಳು
11. ಸಭಾಪತಿಯವರು ನೀಡುವ ತೀರ್ಪುಗಳು
12. ಇತರೆ ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸುವುದು
13. ಮಾಹಿತಿ ಹಕ್ಕು ಕಾಯ್ದೆ ಅಡಿ ಸ್ವೀಕರಿಸುವ ಅರ್ಜಿಗಳ ನಿರ್ವಹಣೆ
14. ಅಧಿವೇಶನದ ವೇಳೆ ಸಭೆಯ ಕಡತಗಳನ್ನು ತಯಾರಿಸುವುದು
15. ಸದಸ್ಯರ ಪರಿಚಯ ಪುಸ್ತಕ ತಯಾರಿಸುವುದು
16. ಸದಸ್ಯರುಗಳ ದಸ್ತಗಿರಿ ಹಾಗೂ ಬಿಡುಗಡೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುವುದು
17. ವಿರೋಧ ಪಕ್ಷದ ನಾಯಕರ ಮಾನ್ಯತೆ ನೀಡುವುದು ಹಾಗೂ ರದ್ದುಗೊಳಿಸುವುದು
18. ವಿರೋಧ ಪಕ್ಷದ ಮುಖ್ಯ ಸಚೇತಕರ ಮಾನ್ಯತೆ ನೀಡುವುದು ಹಾಗೂ ರದ್ದುಗೊಳಿಸುವುದು
19. ಸದಸ್ಯರುಗಳ ರಾಜೀನಾಮೆ/ನಿಧನಕ್ಕೆ ಸಂಬಂಧಿಸಿದ ಕಡತ ನಿರ್ವಹಿಸುವುದು
20. ಸಭಾಪತಿಯವರ ಸ್ಥಾನದಲ್ಲಿ ಪದಧಾರಣೆ ಮಾಡುವವರ ಪಟ್ಟಿ ತಯಾರಿಸುವುದು
21. ಶೂನ್ಯವೇಳೆಗೆ ಸಂಬಂಧಿಸಿದ ಕಡತಗಳು
22. ವಿಶ್ವವಿದ್ಯಾಲಯ ಸೆನೆಟ್ ಹಾಗೂ ಇತರೆ ಸಂಸ್ಥೆಗಳಿಗೆ ವಿಧಾನ ಪರಿಷತ್ತಿನ ಸದಸ್ಯರ ನೇಮಕ
ಮಾಡುವುದು
23. ಚುನಾವಣಾ ಆಯೋಗಕ್ಕೆ ವಿಧಾನ ಪರಿಷತ್ತಿನ ಪಕ್ಷಗಳ ಸ್ಥಾನ ಹಾಗೂ ಸದಸ್ಯತ್ವದ ಖಾಲಿ
ಸ್ಥಾನಗಳ ವರದಿ ರವಾನಿಸುವುದು.
24. ಜರ್ನಲ್ ಆಫ್ ಪಾರ್ಲಿಮೆಂಟರಿ ಪತ್ರಿಕೆಗೆ ಮಾಹಿತಿಯ ಒದಗಿಸುವುದು
25. ಮಾನ್ಯ ಸದಸ್ಯರುಗಳ ಆಸ್ತಿ ಮತ್ತು ದಾಯಿತ್ವಕ್ಕೆ ಸಂಬಂಧಿಸಿದ ಕಡತ ನಿರ್ವಹಿಸುವುದು
26. ಸಮಿತಿ ಸಭೆಗಳಿಗೆ ಒದಗಿಸಲಾದ ಉಪಹಾರದ ವೆಚ್ಚ ಪಾವತಿ ನೋಡಿಕೊಳ್ಳುವುದು
27. ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿ
28. ವಿಧೇಯಕಗಳ ಕರ್ತವ್ಯ ನಿರ್ವಹಣೆ,
29. ವಿಧಾನ ಪರಿಷತ್ತಿನ ಅಧಿವೇಶನದ ವೇಳೆ ಸದಸ್ಯರುಗಳಿಗೆ ಆಸನ ಹಂಚಿಕೆ ಕರ್ತವ್ಯಗಳು
30. ಸರ್ಕಾರಿ : ವಿಶೇಷ : ಖಾಸಗಿ ನಿರ್ಣಯಗಳು
31. ಸಭಾನಾಯಕರ ಮಾನ್ಯತೆ ನೀಡುವುದು ಹಾಗೂ ರದ್ದುಗೊಳಿಸುವುದು
32. ಸರ್ಕಾರಿ ಮುಖ್ಯ ಸಚೇತಕರ ಮಾನ್ಯತೆ ನೀಡುವುದು ಹಾಗೂ ರದ್ದುಗೊಳಿಸುವುದು
33. ಸಭಾಪತಿಯವರ ಚುನಾವಣೆ
34. ಉಪ ಸಭಾಪತಿಯವರ ಚುನಾವಣೆ
35. ಅಧಿವೇಶನದ ಕಾರ್ಯಕಲಾಪಗಳ ಸಲಹಾ ಸಮಿತಿಯ ಕರ್ತವ್ಯಗಳು
36. ನಿಯಮಾವಳಿ ಸಮಿತಿ ಕರ್ತವ್ಯಗಳು
37. ನಿಲುವಳಿ ಸೂಚನೆ (ನಿಯಮ 59)ಕರ್ತವ್ಯ ನಿರ್ವಹಣೆ
38. ಕಾರ್ಯದರ್ಶಿಯವರ ವರದಿ ತಯಾರಿಸುವುದು
39. ಸದಸ್ಯರುಗಳ ಪ್ರಮಾಣ ವಚನ ಸ್ವೀಕಾರ/ನಿವೃತ್ತ ಸದಸ್ಯರುಗಳ ಬೀಳ್ಕೊಡುಗೆ ಸಮಾರಂಭ
ಏರ್ಪಡಿಸುವುದು
40. ಅಧಿವೇಶನದ ವೇಳೆ ಸದಸ್ಯರುಗಳಿಗೆ ಕಾರ್ಯಕಲಾಪಗಳ ಪಟ್ಟಿ ವಿತರಿಸುವುದು
41. ಶಾಸಕರ ದಿನಚರಿ ಪುಸ್ತಕಗಳ ಮುದ್ರಣ ಕಾರ್ಯದ ನಿರ್ವಹಣೆ
42. ವಿಧಾನ ಪರಿಷತ್ತಿನಲ್ಲಿ ಸದಸ್ಯರಿಗೆ ಲೆಕ್ಕಪರಿಶೋಧನಾ ವರದಿಗಳನ್ನು : ವಾರ್ಷಿಕ ವರದಿಗಳನ್ನು
: ದಿನಚರಿ : ಕ್ಯಾಲೆಂಡರ್ ಇತರೆ ಕಾಗದ ಪತ್ರಗಳನ್ನು ವಿತರಿಸುವುದು
43. ಸದಸ್ಯರುಗಳ ವಿಳಾಸ:ದೂರವಾಣಿ ಸಂಖ್ಯೆ ಪಟ್ಟಿ ತಯಾರಿಸುವುದು ಹಾಗೂ ಸಂಬಂಧಿಸಿದವರಿಗೆ
ವಿತರಿಸುವುದು
44. ಅಧಿವೇಶನದ ವೇಳೆ ಇಲಾಖಾಧಿಕಾರಿಗಳಿಗೆ ಪಾಸ್‍ಗಳನ್ನು ವಿತರಿಸುವುದು
45. ಶಾಖೆಯ ಎಲ್ಲಾ ಮುದ್ರಣ ಕಾರ್ಯಗಳ ಬಗ್ಗೆ ಮುದ್ರಣಾಲಯದ ಕೆಲಸದಲ್ಲಿ ಸಹಕರಿಸುವುದು
46. ವಿಧಾನ ಪರಿಷತ್ತಿನ ಸದಸ್ಯರುಗಳ ನಿವೃತ್ತಿ ಪಟ್ಟಿ:ಪಕ್ಷಗಳ ಬಲಾಬಲಗಳ ಪಟ್ಟಿ
ತಯಾರಿಸುವುದು

(ii)ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

ಕ್ರ.ಸಂ
1

 

ಹುದ್ದೆ
ಕಾರ್ಯದರ್ಶಿ

ಅಧಿಕಾರಗಳು/ಕರ್ತವ್ಯಗಳು
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಮುಖ್ಯಸ್ಥರು.

  • ಸಚಿವಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವುದು.
  • ಮಾನ್ಯ ಸಭಾಪತಿಯವರಿಗೆ ಸಲಹೆ/ಮಾರ್ಗದರ್ಶನ ನೀಡುವುದು.

2

ಜಂಟಿ ಕಾರ್ಯದರ್ಶಿ

  • ಪ್ರಮುಖವಾದ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವರದಿ ಮಾಡುವುದು.

3

ಉಪ ಕಾರ್ಯದರ್ಶಿ

  • ಪ್ರಮುಖವಾದ ವಿಷಯಗಳನ್ನು ಜಂಟಿ ಕಾರ್ಯದರ್ಶಿಯವರಿಗೆ ವರದಿ ಮಾಡುವುದು.

4

ಅಧೀನ ಕಾರ್ಯದರ್ಶಿ

  • ಶಾಖೆಯ ಸಂಪೂರ್ಣ ಮೇಲ್ವಿಚಾರಣಾ ಅಧಿಕಾರಿ.
  • ಶಾಖಾಧಿಕಾರಿಗಳು ಮಂಡಿಸುವ ಕಡತಗಳ ಪರಿಶೀಲನೆ.

5

ಶಾಖಾಧಿಕಾರಿ

  • ಶಾಖೆಯ ಮೇಲ್ವಿಚಾರಣೆ.
  • ವಿಷಯ ನಿರ್ವಾಹಕರು ಮಂಡಿಸಿದ ಕಡತಗಳನ್ನು ಪರಿಶೀಲಿಸುವುದು.

6

ಹಿರಿಯ ಸಹಾಯಕರು/
ಸಹಾಯಕರು/
ಕಿರಿಯ ಸಹಾಯಕರು

  • ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು.
  • ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.

7

ಕಿರಿಯ ಸಹಾಯಕರು

  • ಶಾಸಕರ ದಿನಚರಿ, ಕ್ಯಾಲೆಂಡರ್‍ಗಳನ್ನು ಮಾನ್ಯ ಸದಸ್ಯರುಗಳಿಗೆ ವಿತರಿಸುವುದು.
  • ಇಲಾಖೆಗಳ/ನಿಗಮ/ಮಂಡಲಿಗಳ/ಪ್ರಾಧಿಕಾರಗಳ ವಾರ್ಷಿಕ ವರದಿಗಳನ್ನು ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಸ್ವೀಕರಿಸುವುದು ಮತ್ತು ಸದಸ್ಯರುಗಳಿಗೆ ವಿತರಿಸುವ ಕಾರ್ಯನಿರ್ವಹಿಸುವುದು.

7

ದಲಾಯತ್

  • ಕಚೇರಿಯನ್ನು ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಇಡುವುದು.
  • ಕಡತಗಳನ್ನು/ಪತ್ರಗಳನ್ನು ವಿಧಾನ ಸಭೆ/ವಿಧಾನ ಪರಿಷತ್ತಿನ ಇತರೆ ಶಾಖೆಗಳಿಗೆ ಹಾಗೂ ಇತರೆ ಇಲಾಖೆಗಳಿಗೆ ತಲುಪಿಸುವುದು.
  • ಪುಸ್ತಕಗಳನ್ನು ಜೋಡಿಸುವುದು.
  • ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ನೌಕರರು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.


(iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ:

ಕ್ರ.ಸಂ ಹುದ್ದೆ ಕಾರ್ಯವಿಧಾನ
1 ವಿಷಯ ನಿರ್ವಾಹಕರು
ಸ್ವೀಕೃತಿಯಲ್ಲಿನ ಪ್ರಸ್ತಾವನೆಯ ಬಗ್ಗೆ ಹೊಸ ಕಡತ ತೆರೆಯುವುದು ಅಥವಾ ಅಸ್ತಿತ್ವದಲ್ಲಿರುವ ಕಡತದಲ್ಲಿ ಸ್ವೀಕೃತಿಯನ್ನು ಮಂಡಿಸುವುದು.
ವಿಷಯ ನಿರ್ವಾಹಕರ ಡೈರಿಯನ್ನು ನಿರ್ವಹಿಸುವುದು
2 ಶಾಖಾಧಿಕಾರಿ
ಪ್ರಸ್ತಾವನೆಯನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸಿ ಅಧೀನ ಕಾರ್ಯದರ್ಶಿಯವರಿಗೆ ಮಂಡಿಸುವುದು
3 ಅಧೀನ ಕಾರ್ಯದರ್ಶಿ
ಪ್ರಸ್ತಾವಿಕ ಅನುಕ್ರಮದ ಸೂಕ್ತತೆ ಬಗ್ಗೆ ತಿಳಿಸುವುದು ಹಾಗೂ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಅಧಿನಿಯಮಗಳಿಗನುಸಾರವಾಗಿ ಅವುಗಳನ್ನು ವ್ಯಾಖ್ಯಾನಿಸುವುದು ಅಥವಾ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವುದು.
4 ಉಪ ಕಾರ್ಯದರ್ಶಿ ಪ್ರಸ್ತಾವನೆಯನ್ನು ಪರಿಶೀಲಿಸಿ ಆದೇಶಕ್ಕಾಗಿ ಮಂಡಿಸುವುದು.
5 ಜಂಟಿ ಕಾರ್ಯದರ್ಶಿ
ಪ್ರಕರಣವನ್ನು ಎಲ್ಲಾ ದೃಷ್ಟಿಯಿಂದ ವಿಮರ್ಶೆ ಮಾಡುವುದು ಮತ್ತು ಪರಿಶೀಲನೆಯಲ್ಲಿರುವ ಪ್ರಸ್ತುತ ವಿಷಯದಲ್ಲಿ ಅಂತಿಮವಾಗಿ ಅಳವಡಿಸಬಹುದಾದ ಹಾಗೂ ಅನುಕ್ರಮದ ಕುರಿತು ಕಡತವನ್ನು ಕಾರ್ಯದರ್ಶಿಗಳ ಅನುಮೋದನೆಗಾಗಿ ಮಂಡಿಸುವುದು ಅಥವಾ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವುದು
6 ಕಾರ್ಯದರ್ಶಿ
ವಿಶೇಷ ಮಂಡಳಿ/ಮಂಡಳಿ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಪ್ರಸ್ತಾವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿರ್ಣಯಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಿಮ ಆದೇಶಕ್ಕಾಗಿ ಮಾನ್ಯ ಸಭಾಪತಿಯವರಿಗೆ ಕಡತವನ್ನು ಮಂಡಿಸುವುದು.

(iv) ಶಾಸನ ರಚನಾ ಶಾಖೆಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು:

ಕ್ರ.ಸಂ ಹುದ್ದೆ ಕಾರ್ಯವಿಧಾನ
1 ದಲಾಯತ್ ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು
2 ವಿಷಯ ನಿರ್ವಾಹಕರು ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು
ಕಡತ/ಸ್ವೀಕೃತಿ ಗಳನ್ನು ಮಂಡಿಸಲು ಮೂರು ದಿನಗಳವರೆಗೆ ಕಾಲಾವಕಾಶ
ಆದ್ಯತೆಯಾಗಿದ್ದಲ್ಲಿ ಕೂಡಲೇ ಮಂಡಿಸುವುದು
3 ಶಾಖಾಧಿಕಾರಿ
ಅಧೀನ ಕಾರ್ಯದರ್ಶಿ
ಉಪ ಕಾರ್ಯದರ್ಶಿ
ಜಂಟಿ ಕಾರ್ಯದರ್ಶಿ
ಕಾರ್ಯದರ್ಶಿ
ಆದ್ಯತೆಯ ಮೇಲೆ ಕಾರ್ಯಗಳನ್ನು ನಿರ್ವಹಿಸುವುದು