ಸರ್ಕಾರಿ ಭರವಸೆಗಳ ಸಮಿತಿ

ಮುನ್ನುಡಿ
ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ಅಥವಾ ವಿಧೇಯಕಗಳು, ನಿರ್ಣಯಗಳು,ಪ್ರಸ್ತಾವಗಳು ಮುಂತಾದವುಗಳ ಮೇಲೆ ಚರ್ಚಿಸುವಾಗ ಕೆಲವೊಮ್ಮೆ ಸಚಿವರು ಭರವಸೆಗಳು,ವಾಗ್ದಾನಗಳು,ಆಶ್ವಾಸನೆ ನೀಡುತ್ತಾರೆ.ವಿಧಾನ ಪರಿಷತ್ತಿನ ಪರವಾಗಿ ಇಂಥ ಭರವಸೆಗಳು ಕಾರ್ಯಗತಗೊಳ್ಳುವುದನ್ನು ಗಮನಿಸುವುದಕ್ಕಾಗಿ,ಕಾರ್ಯ ವಿಧಾನ ಹಾಗೂ ನಡವಳಿಕೆಗಳ ನಿಯಮಗಳಲ್ಲಿ ಸರ್ಕಾರಿ ಭರವಸೆಗಳ ಸಮಿತಿ ಎಂಬ ಒಂದು ಸಮಿತಿಯನ್ನು ರಚಿಸಲು ಉಪಬಂಧ ಕಲ್ಪಿಸಲಾಗಿದೆ.
    ಸರ್ಕಾರಿ ಭರವಸೆಗಳ ಸಮಿತಿಯು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಮತ್ತು ನಡವಳಿಕೆ ನಿಯಮಗಳ 219ನೇ ನಿಯಮವನ್ನು ಅನುಸರಿಸಿ,190 ರಿಂದ 221ನೇ ನಿಯಮಗಳಲ್ಲಿ ಸ್ಥೂಲವಾಗಿ ವಿವರಿಸಿರುವ ಸಮಿತಿಗಳ ಸಾಮಾನ್ಯ ಕಾರ್ಯವಿಧಾನಕ್ಕೆ ಪೂರಕವಾಗಲು ಆಂತರಿಕ ಕಾರ್ಯನಿರ್ವಹಣಾ ನಿಯಮಗಳನ್ನು ರಚಿಸಿದೆ.ವಿಧಾನ ಪರಿಷತ್ತಿನ ಕಾರ್ಯ ವಿಧಾನ ಮತು ನಡವಳಿಕೆ ನಿಯಮಗಳ 259 ಮತ್ತು 260ನೇ ನಿಯಮಗಳಲ್ಲಿ ಸಮಿತಿಯ ಪ್ರಕಾರಗಳು ಹಾಗೂ ಸನ್ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಗಳ ಅನುಮೋದನೆಯೊಂದಿಗೆ ಅದನ್ನು ರಚಿಸುವ ಕುರಿತಾಗಿ ಹೇಳಲಾಗಿದೆ.ಈ ನಿಯಮಗಳು ಸಮಿತಿಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಸಹಾಯಕವಾಗಿವೆ.ಈ ಆಂತರಿಕ ಕಾರ್ಯ ನಿರ್ವಹಣಾ ನಿಯಮಗಳನ್ನು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯು 1988ರ ನವೆಂಬರ್‌ 30ನೇ ದಿನಾಂಕದಂದು ಅಳವಡಿಸಿಕೊಳ್ಳಲಾಗಿದೆ.
    ಈ ಕಿರು ಪುಸ್ತಕದಲ್ಲಿ ಎಲ್ಲವನ್ನು ಅಡಕಗೊಳಿಸುವುದಕ್ಕಾಗಿ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಸಮುಚಿತ ಉದ್ಧೃತಗಳನ್ನು ಅನುಬಂಧಿಸಲಾಗಿದೆ.

                                                 
                                      ಕಾರ್ಯದರ್ಶಿ
                                            ಕರ್ನಾಟಕ ವಿಧಾನ ಪರಿಷತ್ತು      
 
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru