HOME

BIO-DATA
ಶ್ರೀ ಕೆ. ಬಿ. ಶಾಣಪ್ಪ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ನಾಮನಿರ್ದೇಶನ ಹೊಂದಿದವರು)
(ಭಾರತೀಯ ಜನತಾ ಪಕ್ಷ )
ಮನೆ ವಿಳಾಸ : ಮನೆ ನಂ.10-105/9, ಶರಣ ನಗರ, ಬ್ರಂಪುರ, ಕಲ್ಬುರ್ಗಿ
ಜನ್ಮ ದಿನಾಂಕ : 16-05-1938
ಜನ್ಮ ಸ್ಥಳ : ಶಹಾಬಾದ, ಚಿತ್ತಾಪೂರ ತಾಲ್ಲೂಕು
ತಂದೆಯ ಹೆಸರು : ಭೀಮಶಾ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಜಮಲಾ
ಮಕ್ಕಳು : ಗಂಡು - 02, ಹೆಣ್ಣು - 02
ವಿದ್ಯಾರ್ಹತೆ : ಎಂ.ಎ. (ರಾಜ್ಯ ಶಾಸ್ತ್ರ)
ವೃತ್ತಿ : ಸಮಾಜ ಸೇವೆ
ಮೊಬೈಲ್ ಸಂಖ್ಯೆ : 9448434467
ಹೊಂದಿರುವ ಸ್ಥಾನಮಾನಗಳು : 10.08.2012 ರಿಂದ 09.08.2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್.
  1. ಶಹಾಬಾದ್‍ನಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ನಂತರ 1960-1963 ರವರೆಗೆ ಎ.ಸಿ.ಸಿ ಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ.
  2. ಎ.ಬಿ.ಎಲ್ ಕಂಪನಿ ಶಹಾಬಾದ್‍ನಲ್ಲಿ 1960-1974ರವರೆಗೆ ನಂತರ 1978-1980ರವರೆಗೆ ಕಾರ್ಕೂನನಾಗಿ ಕರ್ತವ್ಯ ನಿರ್ವಹಣೆ. 1970ರಲ್ಲಿ ದಲಿತ ಸಂಘರ್ಷ ಸಮಿತಿಯೊಂದಿಗೆ ಹೋರಾಟ.
  3. ಎ.ಸಿ.ಸಿ ವಾಡಿ ಸಿ.ಸಿ.ಐ ಕುರಕುಂಟ ಸಿಮೆಂಟ್ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿಯಾಗಿ 1983ರವರೆಗೆ ಕರ್ತವ್ಯ ನಿರ್ವಹಣೆ.
  4. ಕಮ್ಯುನಿಸ್ಟ್ ಪಕ್ಷಕ್ಕೆ 1960ರಲ್ಲಿ ಸೇರ್ಪಡೆಯಾಗಿ 1992ರವರೆಗೆ ಕರ್ತವ್ಯ ನಿರ್ವಹಿಸಿ ಎ.ಬಿ.ಎಲ್ ನಲ್ಲಿ ಟ್ರೇಡ್ ಯೂನಿಯನ್ ಸ್ಥಾಪಿಸಿ ಎ.ಐ.ಟಿ.ಯು.ಸಿ ಸ್ಥಾಪಿಸಲಾಯಿತು.
  5. 1974ರಲ್ಲಿ ಎ.ಬಿ.ಎಲ್ ಕಂಪನಿಯಲ್ಲಿ ಸತತವಾಗಿ 74 ದಿನಗಳ ಮುಷ್ಕರ ಕೈಗೊಂಡು ಕೆಲಸದಿಂದ ವಜಾಗೊಂಡಿರಲಾಗಿರುತ್ತದೆ.
  6. 1980-81ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕರೆಸ್ಪಾಂಡೆನ್ಸ್ ಎಂ.ಎ ಪದವಿ ಪಡೆಯಲಾಗಿದೆ.
  7. 1983-84ರ ಡಿಸೆಂಬರ್‌ ವರೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನಾಗಿ ವಿಧಾನಸಭೆಗೆ ಆಯ್ಕೆ.
  8. ಪುನ: 1985-89ರವರೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನಾಗಿ ವಿಧಾನಸಭೆಗೆ ಆಯ್ಕೆ.  
  9. 1992ರಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿರ್ಗಮನ ಮತ್ತು ಜನತಾದಳ ಪಕ್ಷಕ್ಕೆ ಪ್ರವೇಶ. 1996ರ ಜನವರಿಯಿಂದ ಜೂನ್‍ವರೆಗೆ ಪರಿಶಿಷ್ಠ ಜಾತಿ ಮತ್ತು ಪಂಗಡದ ಅಧ್ಯಕ್ಷನಾಗಿ ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶನ. 1997ರವರೆಗೆ ಜನತಾ ಪಕ್ಷದಲ್ಲಿ ಪಾರ್ಲಿಮೆಂಟ್ರಿ ಬೋರ್ಡ್ ಅಧ್ಯಕ್ಷನಾಗಿ ಸೇವೆ.
  10. ಸನ್ಮಾನ್ಯ ಶ್ರೀ ಜೆ. ಹೆಚ್. ಪಟೇಲ್ ರವರ ಮುಖ್ಯಮಂತ್ರಿಯ ಕ್ಯಾಬಿನೆಟ್‍ನಲ್ಲಿ ಅಬಕಾರಿ ಸಚಿವನಾಗಿ ಡಿಸೆಂಬರ್ 1996ರವರೆಗೆ ಕರ್ತವ್ಯ ನಿರ್ವಹಣೆ ಡಿಸೆಂಬರ್ ಮಾಹೆಯ ಅಂತ್ಯದಲ್ಲಿ ಸದರಿ ಸಚಿವರ ಸ್ಥಾನಕ್ಕೆ ರಾಜೀನಾಮೆ.
  11. ಡಿಸೆಂಬರ್ 1996-2002ರವರೆಗೆ ವಿಧಾನ ಪರಿಷತ್ತಿನ ಸದಸ್ಯನಾಗಿ ನಾಮನಿರ್ದೇಶನ.
  12. 2003ರಲ್ಲಿ ಜನತಾ ಪಕ್ಷದಿಂದ ನಿರ್ಗಮನ. ಭಾರತೀಯ ಜನತಾ ಪಕ್ಷದ ಸದಸ್ಯನಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ 2006ರವರೆಗೆ ಕರ್ತವ್ಯ ನಿರ್ವಹಣೆ.
  13. ಜುಲೈ 2006-2012ರ ಏಪ್ರಿಲ್‍ವರೆಗೆ ಬಿ.ಜೆ.ಪಿ ಪಕ್ಷದಿಂದ ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ.  
  14. ಸಂಸದನಾಗಿ ಡಿಫೆನ್ಸ್ ಸ್ಟಾಂಡಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಪೇಪರ್ ಲೇಯಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಎಸ್.ಸಿ/ಎಸ್.ಟಿ ವೆಲ್‍ಫೇರ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಮೇಜರ್ ಮತ್ತು ಮೀಡಿಯಂ ಪಬ್ಲಿಕ್ ಅಂಡರ್ ಟೇಕನ್ಸ್ ಸ್ಟಾಡಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಶಿಪಿಂಗ್ ಬೋರ್ಡ್ ಆಫ್ ಇಂಡಿಯಾದ ಸದಸ್ಯನಾಗಿ ಕರ್ತವ್ಯ ನಿರ್ವಹಣೆ ,2006-2012ರವರೆಗೆ ಸಿಲ್ಕ್ ಬೋರ್ಡ್ ನಿರ್ದೇಶಕನಾಗಿ ಕರ್ತವ್ಯ ನಿರ್ವಹಣೆ ,1981ರಲ್ಲಿ ನೃಪತುಂಗ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಸ್ಥಾಪಿಸಿ 120 ನಿವೇಶನಗಳನ್ನು ,ಹಂಚಿಕೆ ಮಾಡಿ ಸುಮಾರು 150 ಜನರಿಗೆ ಕಲಬುರ್ಗಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ
ಹವ್ಯಾಸ :   ಚೆಸ್, ಬ್ರಿಡ್ಜ್ ಆಟ ಮತ್ತು ಓದುವುದು, ಸಂಗೀತ ಕೇಳುವುದು, ಪುಟ್‍ಬಾಲ್ ಮತ್ತು ಕಬ್ಬಡ್ಡಿ ಆಟಗಾರ