HOME

BIO-DATA

ಡಾ: ಜಯಮಾಲ ಎಂ.ಎ, ಪಿಹೆಚ್.ಡಿ

ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು.

ಮನೆ ವಿಳಾಸ:
496, 6ನೇ ಮುಖ್ಯ ರಸ್ತೆ, ಡಾಲರ್ಸ್ ಕಾಲೋನಿ, ಆರ್.ಎಂ.ವಿ. 2ನೇ ಹಂತ, ಬೆಂಗಳೂರು-560094.
ಮೊಬೈಲ್ ಸಂಖ್ಯೆ:
9844014908
ಇ-ಮೇಲ್:
jaimala.ram@gmail.com
ಜನ್ಮ ದಿನಾಂಕ:
28-02-1959
ಜನ್ಮ ಸ್ಥಳ:
ಪಣಂಬೂರು, ಮಂಗಳೂರು (ಕರ್ನಾಟಕ)
ವಿವಾಹಿತರೆ :
ವಿವಾಹಿತರು
ಪತಿಯ ಹೆಸರು :
ರಾಮಚಂದ್ರ ಹೆಚ್ ಎಂ
ವಿದ್ಯಾರ್ಹತೆ:
ಎಂ.ಎ. - ರಾಜ್ಯ ಶಾಸ್ತ್ರ
ಪಿ.ಹೆಚ್.ಡಿ – ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ
ಪುನರ್ವಸತಿ : ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ (ಬೆಂಗಳೂರು ವಿಶ್ವವಿದ್ಯಾಲಯ) .
ಪಂಗಡ
ಹಿಂದು (ಬಿಲ್ಲವ)
ಸಂಶೋಧನೆಯ ಸಾರ:
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಂಬಲದಿಂದ ಭಾರತ ದೇಶ ಸ್ವಾತಂತ್ರ್ಯಾ ನಂತರದಲ್ಲಿ ಅನೇಕ ರೀತಿಯ ಅಭಿವೃದ್ಧಿ ಪ್ರಯೋಗಗಳನ್ನು ಕೈಗೊಂಡಿತು. ಅವುಗಳಲ್ಲಿ ಮಹಿಳಾ ಸಮಾನತೆ ಮತ್ತು ಮಹಿಳಾ ಸಂವರ್ಧನೆ ಅತ್ಯಂತ ಮುಖ್ಯವಾದ ಕಾರ್ಯಕ್ರಮ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಅನುಷ್ಠಾನಗೊಂಡ ಕಾರ್ಯಕ್ರಮಗಳು ಮಹಿಳೆಯ ಜೀವನ ಮಟ್ಟವನ್ನು ಸುಧಾರಿಸುವ ಬದಲು ಮತ್ತಷ್ಟು ಸಂಕಟ ಮತ್ತು ಶೋಷಣೆಗಳಿಗೆ ದೂಡಿತು. ಇಂತಹ ಕಾರ್ಯಕ್ರಮಗಳ ಪರಿಣಾಮವಾಗಿ ರೂಪಗೊಂಡಿದ್ದೇ ಮಹಿಳಾ ನಿರಾಶ್ರಿತತೆಯ ಸಮಸ್ಯೆ. ಈ ಪ್ರಮೇಯವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಂಡ ಬೃಹತ್ ನೀರಾವರಿ ಕಾರ್ಯಕ್ರಮವಾದ ‚"ಆಲಮಟ್ಟಿ ಜಲಾಶಯ".
ನಿರ್ಮಾಣ ಮತ್ತು ಅದರಿಂದ ಉಂಟಾದ ಮಹಿಳಾ ನಿರಾಶ್ರಿತತೆಯ ಆಯಾಮಗಳನ್ನು ಅಧ್ಯಯನ ಮಾಡುವ ಸಲುವಾಗಿ ‚ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ‛ ವಿಷಯದಡಿಯಲ್ಲಿ ಸಂಶೋಧನೆಯನ್ನು ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಮಹಿಳಾ ಪುನರ್ವಸತಿ ಕಾರ್ಯಕ್ರಮಗಳು ಕೂಡ ಹೇಗೆ ಪುರುಷಪ್ರಧಾನ ದೃಷ್ಟಿಕೋನದಿಂದಲೇ ರೂಪಗೊಂಡಿರುತ್ತದೆ ಎಂಬ ವಾಸ್ತವವನ್ನು ಕ್ಷೇತ್ರಕಾರ್ಯ, ಸಂದರ್ಶನ, ಪ್ರಶ್ನಾವಳಿ, ಮುಂತಾದ ವಿವಿಧ ಸಂಶೋಧನ ವಿಧಾನಗಳ ಮೂಲಕ ಅಧ್ಯಯನ ಮಾಡಿ, ಮಹಿಳಾ ನಿರಾಶ್ರಿತತೆಯ ಅನುಷ್ಠಾನದಲ್ಲಿರುವ ಲೋಪದೊಷಗಳನ್ನು ಸಂಶೋಧನ ಫಲಿತಾಂಶ ರೂಪದಲ್ಲಿ ಮಂಡಿಸಲಾಗಿದೆ.
ಭಾಷಾ ಜ್ಞಾನ : ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್
ವೃತ್ತಿ:
ಚಲನಚಿತ್ರ ಕಲಾವಿದೆ, ನಿರ್ಮಾಪಕಿ, ಮತ್ತು ವ್ಯವಸಾಯ.
ಹವ್ಯಾಸಗಳು
ತೋಟಗಾರಿಕೆ, ಒಳವಿನ್ಯಾಸ, ವಸ್ತ್ರಾಲಂಕಾರ, ಓದುವುದು ಮತ್ತು ಪ್ರಯಾಣ, ರಂಗಭೂಮಿ.
ಸಾಧನೆಗಳು:
ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ.

1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ. ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ ‚ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ‛ ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.

ಸೇವೆಗಳು:

ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ ‚ಶಕ್ತಿಧಾಮ‛ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ.

ಏಡ್ಸ್ ಪೀಡಿತರ ನೆರವು, ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ.

ಕನ್ನಡ ಭಾಷೆ, ನಾಡು, ನುಡಿ, ನೆಲ, ಜಲ, ಇವುಗಳಿಗೆ ಧಕ್ಕೆವುಂಟಾದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ.

ಕರ್ನಾಟಕದಲ್ಲಿ ಅನೇಕ ‚ರಂಗಮಂದಿರಗಳನ್ನು ಕಟ್ಟಲು ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ ‚ಸಂಗೀತ ಸಂಜೇ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

ಹುದ್ದೆಗಳು:
  1. ಅಧ್ಯಕ್ಷರು- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
  2. ಅಧ್ಯಕ್ಷರು- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ.
  3. ಅಧ್ಯಕ್ಷರು- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ.
  4. ಸದಸ್ಯರು – ಕರ್ನಾಟಕ ವಿಧಾನ ಪರಿಷತ್.
  5. ಸ್ಥಾಪಕ ನಿರ್ದೇಶಕರು, ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ).
  6. ವ್ಯವಸ್ಥಾಪಕ ಧರ್ಮದರ್ಶಿ- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು.
  7. ಭಾರತೀಯ ಪನೋರಮ-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ).
  8. ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ.

ಸಾಹಿತ್ಯಾಸಕ್ತಿ
  1. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ.
  2. ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ.
  3. ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ
  4. ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.

ಪ್ರಶಸ್ತಿಗಳ ವಿವರ :
  1. ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998-"ತಾಯಿಸಾಹೇಬ".
  2. ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ- 1998-‚"ತಾಯಿಸಾಹೇಬ".
  3. ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ- 2006-"ತುತ್ತೂರಿ".
  4. 15ನೇ ಟೋಕಿಯೋ ಅರ್ತ್‍ವಿಷನ್‍ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ- ಪ್ರಶಸ್ತಿ 2006,"ತುತ್ತೂರಿ".
  5. ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ".
  6. ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- "ತಾಯಿಸಾಹೇಬ".
  7. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – "ತಾಯಿಸಾಹೇಬ".
  8. ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001
  9. ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001
  10. ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ"
  11. ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999-"ತಾಯಿಸಾಹೇಬ".
  12. ಸಿನಿ ಎಕ್ಸ್‍ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-999-"ತಾಯಿಸಾಹೇಬ".
  13. ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ-"ಕಾಸದಾಯೆ ಕಂಡನಿ"
  14. ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995
  15. ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994
  16. ರಾಜೀವ್‍ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995
  17. ಗ್ಲೋಬಲ್‍ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ.
  18. ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ".
  19. ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ".
  20. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-‚"ತಾಯಿಸಾಹೇಬ".
  21. ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-‚"ತಾಯಿಸಾಹೇಬ".
  22. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- ‚ಕಿತ್ತೂರುರಾಣಿ ಚೆನ್ನಮ್ಮ‛ ಪ್ರಶಸ್ತಿ
  23. ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ
  24. 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ

ರಾಜಕೀಯ :
  1. ಕಾಂಗ್ರೆಸ್ ಪಕ್ಷದ ಸಕ್ರಯ ಸದಸ್ಯೆ.
  2. ವಿಧಾನಸಭೆ ಮತ್ತು ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ತಾರಾ ಪ್ರಚಾರಕಿಯಾಗಿ ಕಾರ್ಯ ನಿರ್ವಹಣೆ.
  3. 2014ರಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ನಾಮಕರಣ.
  4. 2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ
    ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ.
  5. 2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ.
  6. ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ.
  7. 2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು
    ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವೆಯಾಗಿ ಪದಗ್ರಹಣ.