HOME

BIO-DATA

ಶ್ರೀ ಸೋಮಣ್ಣ ವಿ.
ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)

ಅವಧಿ - (2010 - 2016)
ಮನೆ ವಿಳಾಸ : # 967, 2ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು-560040
ಜನ್ಮ ದಿನಾಂಕ : 20.07.1951
ಜನ್ಮ ಸ್ಥಳ : ದೊಡ್ಡ ಮರಳವಾಡಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ
ತಂದೆಯ ಹೆಸರು : ಲೇಟ್‌ ವೀರಣ್ಣ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಜಿ. ಶೈಲಜ
ಮಕ್ಕಳು : ಗಂಡು - 2, ಹೆಣ್ಣು - 1
ವಿದ್ಯಾರ್ಹತೆ : (ಬಿ.ಎ.)
ವೃತ್ತಿ : ಸಮಾಜ ಸೇವೆ
ದೂರವಾಣಿ ಸಂಖ್ಯೆ : 080-23302397
ಮೊಬೈಲ್‌ ಸಂಖ್ಯೆ : 9945570222/9945108900
ಇ-ಮೇಲ್‌ : vsomannavijayanagara@gmail.com
ಹೊಂದಿರುವ ಸ್ಥಾನಮಾನಗಳು : 1. 15.06.2010 - 14.06.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ.
ಹೊಂದಿದ್ದ ಸ್ಥಾನಮಾನಗಳು : 1. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕತ್ವ.
‌2. 1983 ರಲ್ಲಿ ವಿಜಯನಗರದ ಮಹಾನಗರ ಪಾಲಿಕೆ ಸದಸ್ಯರಾಗಿ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ.
3. 1994 ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಬಹುಮತದಿಂದ ವಿಧಾನಸಭೆಗೆ ಆಯ್ಕೆ.
4. 1996 ರಲ್ಲಿ ಕರ್ನಾಟಕ ಸರ್ಕಾರದ ಬಂಧಿಖಾನೆ ಸಚಿವರಾಗಿ ಹಾಗೂ 1999 ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಲ್ಪಾವಧಿಯಲ್ಲಿ ಅತ್ಯಧಿಕ ಸಾಧನೆ ಮಾಡಿದ ಹೆಗ್ಗಳಿಕೆ (ಫ್ಲೈ ಓವರ್‌, ಹೈಮಾಸ್ಟ್‌ ದೀಪಗಳ ಅಳವಡಿಕೆ, ವಿಜಯನಗರದಲ್ಲಿ ಬಹುಪಯೋಗಿ ಕಟ್ಟಡಗಳು, ಗ್ರಂಥಾಲಯ ಕಟ್ಟಡಗಳು, ದೇವಾಲಯಗಳ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಇತ್ಯಾದಿ....).
5. 1999 ರ ವಿಧಾನಸಭಾ ಚುನಾವಣೆಯಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ.
‌6. 2004 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ 3ನೇ ಬಾರಿಗೆ ವಿಧಾನಸಭೆಗೆ ಆಯ್ಕೆ.
7. 2008 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆಯ್ಕೆ.
8. ನಂತರ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಗೊಂಡು ದಿನಾಂಕ: 18.06.2009 ರಂದು ವಸತಿ ಮತ್ತು ಮುಜರಾಯಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ.
9. ಜೂನ್‌, 2010ನೇ ಇಸವಿಯಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ.
10. ಸೆಪ್ಷೆಂಬರ್‌, 2010 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನಂತರ ಡಿಸೆಂಬರ್‌, 2010 ರಿಂದ 2013 ರ ವರೆಗೆ ವಸತಿ ಮಂತ್ರಿಯಾಗಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಕಾರ್ಯನಿರ್ವಹಣೆ.
ಹವ್ಯಾಸಗಳು : ರಾಜಕೀಯ, ಸಾಂಸ್ಕೃತಿಕ, ಕ್ರೀಡಾಸಕ್ತಿ
ಇತರೆ ಮಾಹಿತಿ : 1. 2006ನೇ ಸಾಲಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠ, ಬಾಳೆಹೊನ್ನೂರು ಇವರ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ.
2. 2007-08ನೇ ಸಾಲಿನಲ್ಲಿ ಸಾಹಿತ್ಯ ಸಂಘ, ಬೆಂಗಳೂರು ಇವರ ವತಿಯಿಂದ ಟಿ. ಆರ್‌. ಶಾಮಣ್ಣ ಪ್ರಶಸ್ತಿ.
3. ಆರ್ಯಸೇವಾಶ್ರಮದ ಟ್ರಸ್ಟಿ.
4. ಜನಸ್ಪಂದನ - ಗೌರವ ಅಧ್ಯಕ್ಷರು.
5. ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟಿ, ಬೆಂಗಳೂರು.
6. ವಿವಿಧ ಸಂಘ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಕ್ರೀಡಾ ಸಂಸ್ಥೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.