-
ಶಹಾಬಾದ್‍ನಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ನಂತರ 1960-1963 ರವರೆಗೆ ಎ.ಸಿ.ಸಿ ಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ.
-
ಎ.ಬಿ.ಎಲ್ ಕಂಪನಿ ಶಹಾಬಾದ್‍ನಲ್ಲಿ 1960-1974ರವರೆಗೆ ನಂತರ 1978-1980ರವರೆಗೆ ಕಾರ್ಕೂನನಾಗಿ ಕರ್ತವ್ಯ ನಿರ್ವಹಣೆ. 1970ರಲ್ಲಿ ದಲಿತ ಸಂಘರ್ಷ ಸಮಿತಿಯೊಂದಿಗೆ ಹೋರಾಟ.
-
ಎ.ಸಿ.ಸಿ ವಾಡಿ ಸಿ.ಸಿ.ಐ ಕುರಕುಂಟ ಸಿಮೆಂಟ್ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿಯಾಗಿ 1983ರವರೆಗೆ ಕರ್ತವ್ಯ ನಿರ್ವಹಣೆ.
-
ಕಮ್ಯುನಿಸ್ಟ್ ಪಕ್ಷಕ್ಕೆ 1960ರಲ್ಲಿ ಸೇರ್ಪಡೆಯಾಗಿ 1992ರವರೆಗೆ ಕರ್ತವ್ಯ ನಿರ್ವಹಿಸಿ ಎ.ಬಿ.ಎಲ್ ನಲ್ಲಿ ಟ್ರೇಡ್ ಯೂನಿಯನ್ ಸ್ಥಾಪಿಸಿ ಎ.ಐ.ಟಿ.ಯು.ಸಿ ಸ್ಥಾಪಿಸಲಾಯಿತು.
-
1974ರಲ್ಲಿ ಎ.ಬಿ.ಎಲ್ ಕಂಪನಿಯಲ್ಲಿ ಸತತವಾಗಿ 74 ದಿನಗಳ ಮುಷ್ಕರ ಕೈಗೊಂಡು ಕೆಲಸದಿಂದ ವಜಾಗೊಂಡಿರಲಾಗಿರುತ್ತದೆ.
-
1980-81ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕರೆಸ್ಪಾಂಡೆನ್ಸ್ ಎಂ.ಎ ಪದವಿ ಪಡೆಯಲಾಗಿದೆ.
-
1983-84ರ ಡಿಸೆಂಬರ್ ವರೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನಾಗಿ ವಿಧಾನಸಭೆಗೆ ಆಯ್ಕೆ.
-
ಪುನ: 1985-89ರವರೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನಾಗಿ ವಿಧಾನಸಭೆಗೆ ಆಯ್ಕೆ.
-
1992ರಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿರ್ಗಮನ ಮತ್ತು ಜನತಾದಳ ಪಕ್ಷಕ್ಕೆ ಪ್ರವೇಶ. 1996ರ ಜನವರಿಯಿಂದ ಜೂನ್‍ವರೆಗೆ ಪರಿಶಿಷ್ಠ ಜಾತಿ ಮತ್ತು ಪಂಗಡದ ಅಧ್ಯಕ್ಷನಾಗಿ ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶನ. 1997ರವರೆಗೆ ಜನತಾ ಪಕ್ಷದಲ್ಲಿ ಪಾರ್ಲಿಮೆಂಟ್ರಿ ಬೋರ್ಡ್ ಅಧ್ಯಕ್ಷನಾಗಿ ಸೇವೆ.
-
ಸನ್ಮಾನ್ಯ ಶ್ರೀ ಜೆ. ಹೆಚ್. ಪಟೇಲ್ ರವರ ಮುಖ್ಯಮಂತ್ರಿಯ ಕ್ಯಾಬಿನೆಟ್‍ನಲ್ಲಿ ಅಬಕಾರಿ ಸಚಿವನಾಗಿ ಡಿಸೆಂಬರ್ 1996ರವರೆಗೆ ಕರ್ತವ್ಯ ನಿರ್ವಹಣೆ ಡಿಸೆಂಬರ್ ಮಾಹೆಯ ಅಂತ್ಯದಲ್ಲಿ ಸದರಿ ಸಚಿವರ ಸ್ಥಾನಕ್ಕೆ ರಾಜೀನಾಮೆ.
-
ಡಿಸೆಂಬರ್ 1996-2002ರವರೆಗೆ ವಿಧಾನ ಪರಿಷತ್ತಿನ ಸದಸ್ಯನಾಗಿ ನಾಮನಿರ್ದೇಶನ.
-
2003ರಲ್ಲಿ ಜನತಾ ಪಕ್ಷದಿಂದ ನಿರ್ಗಮನ. ಭಾರತೀಯ ಜನತಾ ಪಕ್ಷದ ಸದಸ್ಯನಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ 2006ರವರೆಗೆ ಕರ್ತವ್ಯ ನಿರ್ವಹಣೆ.
-
ಜುಲೈ 2006-2012ರ ಏಪ್ರಿಲ್‍ವರೆಗೆ ಬಿ.ಜೆ.ಪಿ ಪಕ್ಷದಿಂದ ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ.
-
ಸಂಸದನಾಗಿ ಡಿಫೆನ್ಸ್ ಸ್ಟಾಂಡಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಪೇಪರ್ ಲೇಯಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಎಸ್.ಸಿ/ಎಸ್.ಟಿ ವೆಲ್‍ಫೇರ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಮೇಜರ್ ಮತ್ತು ಮೀಡಿಯಂ ಪಬ್ಲಿಕ್ ಅಂಡರ್ ಟೇಕನ್ಸ್ ಸ್ಟಾಡಿಂಗ್ ಕಮಿಟಿಯಲ್ಲಿ ಕರ್ತವ್ಯ ನಿರ್ವಹಣೆ ,ಶಿಪಿಂಗ್ ಬೋರ್ಡ್ ಆಫ್ ಇಂಡಿಯಾದ ಸದಸ್ಯನಾಗಿ ಕರ್ತವ್ಯ ನಿರ್ವಹಣೆ ,2006-2012ರವರೆಗೆ ಸಿಲ್ಕ್ ಬೋರ್ಡ್ ನಿರ್ದೇಶಕನಾಗಿ ಕರ್ತವ್ಯ ನಿರ್ವಹಣೆ ,1981ರಲ್ಲಿ ನೃಪತುಂಗ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಸ್ಥಾಪಿಸಿ 120 ನಿವೇಶನಗಳನ್ನು ,ಹಂಚಿಕೆ ಮಾಡಿ ಸುಮಾರು 150 ಜನರಿಗೆ ಕಲಬುರ್ಗಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ