BIO-DATA |
ಶ್ರೀ ಮುಖ್ಯಮಂತ್ರಿ ಚಂದ್ರು |
|
ಮನೆ ವಿಳಾಸ : | ನಂ-93, 3ನೇ ಮುಖ್ಯರಸ್ತೆ, 9ನೇ ಕ್ರಾಸ್, ಜೆ.ಪಿ.ನಗರ, 4ನೇ ಹಂತ, ಡಾಲರ‍್ಸ್ ಕಾಲೋನಿ, ಬೆಂಗಳೂರು-560078. |
ಜನ್ಮ ದಿನಾಂಕ : | 28ನೇ ಆಗಸ್ಟ್, 1953 |
ತಂದೆಯ ಹೆಸರು : | ಶ್ರೀ ಎನ್. ನರಸಿಂಹಯ್ಯ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಪದ್ಮ |
ಮಕ್ಕಳು : | ಗಂಡು - 2 |
ವಿದ್ಯಾರ್ಹತೆ : | ಬಿ.ಎಸ್ಸಿ., |
ವೃತ್ತಿ : | ಕಲಾವಿದ, ಚಿತ್ರನಟ, ರಂಗ ಕಲಾವಿದ, ಕಿರುತೆರೆಯ ನಟ ಹಾಗೂ ಕೃಷಿಕರು |
ಹೊಂದಿರುವ ಸ್ಥಾನಮಾನಗಳು : | 1. 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 2. 13-6-2008 ಅಧ್ಯಕ್ಷರು, ಕನ್ನಡ ಅಭಿವೃದ್ದಿ ಪ್ರಾಧಿಕಾರ 3. 1998-2004 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 4. 1975-1985 ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಅನುಭವ 5. 1985-1990 ಸದಸ್ಯರು, ಕರ್ನಾಟಕ ವಿಧಾನ ಸಭೆ 6. 2000 ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ 7. 1995-96 & 99 ಸದಸ್ಯರು, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ದಿ ಸಮಿತಿ 8. 1998-99 ಸದಸ್ಯರು, ಹಕ್ಕುಬಾಧ್ಯತಾ ಸಮಿತಿ 9. 1987-89 ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ 10. 1988 ಪ್ಯಾರಿಸ್ ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದ ಪ್ರತಿನಿಧಿ 11. 1987 ಲಂಡನ್ ನ ಮ್ಯಾಂಚೆಸ್ಟರ‍್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. |
ಹವ್ಯಾಸಗಳು : | ಕ್ರೀಡೆ, ಪ್ರವಾಸ, ಓದುವುದು, ಕಥೆ ಮತ್ತು ಕವನ ಬರೆಯುವುದು ಯೋಗ, ಮೂಕಾಭಿನಯ |
ಸಾಮಾಜಿಕ ಮತ್ತು ಇತರೆ ಚಟುವಟಿಕೆಗಳು : | ಜೀವನದ ಎಲ್ಲಾ ಸ್ಥರಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ನಿರ್ಮೂಲನೆ, ಮಾನವನ ಹಕ್ಕುಗಳ ಸಂರಕ್ಷಣೆ, ಜನಜಾಗೃತಿ ಮೂಡಿಸುವುದು ಮತ್ತು ನಮ್ಮ ವ್ಯವಸ್ಥೆಯಲ್ಲಿನ ದುರಾಡಳಿತವನ್ನು ಕೊನೆಗೊಳಿಸುವ ಸಲುವಾಗಿ ‘ಸಂಕಲ್ಪ ಯಾತ್ರೆ’ ಕಾರ್ಯಕ್ರಮದಡಿ ಸಂಘಟನೆ ಮತ್ತು ಹೋರಾಟ ಹಾಗೂ ಈ ಎಲ್ಲಾ ಅಂಶಗಳ ಬಗ್ಗೆ ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸುವುದು ಮತ್ತು ಅವರನ್ನು ಹೆಚ್ಚು ಜಾಗೃತರನ್ನಾಗಿಸುವುದಲ್ಲದೆ ಯುವಕರಲ್ಲಿ ಅವರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ಮಿಸುವುದು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ‘ಕಾರ್ಗಿಲ್ ನಿಧಿ’ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತಿರುವುದು ಮತ್ತು ರಾಜಕೀಯ ಹಾಗೂ ಸಿನಿಮಾ ರಂಗಗಳಿಂದ ನಿಧಿ ಸಂಗ್ರಹಿಸಿ ಸಲ್ಲಿಸಿರುವುದು. ಸೆರೆವಾಸ
ರಂಗಕಲೆ ನಾಟಕದ ಗೀಳು ಹಾಗೂ 12ವರ್ಷದ ಬಾಲಕನಾಗಿದ್ದಾಗ ಶಾಲಾ ದಿನಗಳಲ್ಲೆ ನಾಟಕದಲ್ಲಿ ಭಾಗವಹಿಸುವ ಆಸಕ್ತಿ. 1970ರಿಂದಲೆ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು. ನಾಟಕಗಳ ನಿರ್ದೇಶನ:- ಹದಿನೈದಕ್ಕಿಂತ ಹೆಚ್ಚಿನ ಸಂಖ್ಯೆಯ ನಾಟಕಗಳಿಗೆ ನಿರ್ದೇಶನ ಮಾಡಿರುವ ಅನುಭವ.
ನಟನೆ:- ಭಾರತದ ಬೇರೆ ಬೇರೆ ನಗರಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳಲ್ಲಿ ಸುಮಾರು ನೂರು ನಾಟಕಗಳ 3000 ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುತ್ತಾರೆ. ವಿದೇಶಗಳಲ್ಲೂ ಸಹ ಹಲವಾರು ಪ್ರದರ್ಶಗಳನ್ನು ನೀಡಿರುತ್ತಾರೆ.
ವಿದೇಶಗಳಲ್ಲಿ ಮೂಕಾಭಿನಯ ಪ್ರದರ್ಶನ: 1987 ರಿಂದ 1989ರ ಅವಧಿಯಲ್ಲಿ ಲಂಡನ್, ಪ್ಯಾರೀಸ್, ರೋಮ್, ಸ್ವಿಡ್ಜರ್ ಲ್ಯಾಂಡ್, ಆಮ್ ಸ್ಟರ್‌ಡಮ್, ಬೆಲ್ಜಿಯಂ, ಸಿಂಗಪುರ, ಹಾಂಗ್ ಕಾಂಗ್ ಮತ್ತು ಮಲೇಶಿಯಾಗಳಲ್ಲಿ ಪ್ರದರ್ಶನಗಳನ್ನು ನೀಡಿರುತ್ತಾರೆ. ಪ್ರಶಸ್ತಿ ಸನ್ಮಾನಗಳು:- ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅಚಲಯಾತ್ರೆ’ನಾಟಕ ನಿರ್ದೇಶನ ಮಾಡಿದ್ದಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ: ಪ್ರದರ್ಶಿಸಲಾದ ಪ್ರಮುಖ ನಾಟಕಗಳು:-
ಪ್ರಮುಖ ಚಲನಚಿತ್ರಗಳು ಕಿರುತೆರೆಯಲ್ಲಿ:- ನೂರಾರು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿರುವುದು ಮತ್ತು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ದೈನಿಕ ಧಾರಾವಾಹಿಗಳಲ್ಲಿ ನಟಿಸಿರುತ್ತಾರೆ. |