BIO-DATA |
ಡಾ|| ಚಂದ್ರಶೇಖರ್ ಬ. ಕಂಬಾರ |
|
ಮನೆ ವಿಳಾಸ : | ಗೋದಗೇರಿ ಅಂಚೆ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ- 591251 |
ಈಗಿನ ವಿಳಾಸ : | ಸಿರಿ ಸಂಪಿಗೆ ನಂ:44, ಮೊದಲನೇ ಮುಖ್ಯರಸ್ತೆ, 4ನೇ ಬ್ಲಾಕ್ ಬನಶಂಕರಿ 3ನೇ ಹಂತ, ಬೆಂಗಳೂರು-560085. |
ಜನ್ಮ ದಿನಾಂಕ : | 2ನೇ ಜನವರಿ 1937 |
ಜನ್ಮ ಸ್ಥಳ : | ಗೋದಗೇರಿ |
ತಂದೆಯ ಹೆಸರು : | ಶ್ರೀ ಬಸವಣ್ಣ ಆರ್ ಕಂಬಾರ |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಸತ್ಯಭಾಮ ಸಿ. ಕಂಬಾರ್ |
ಮಕ್ಕಳು : | ಗಂಡು-1, ಹೆಣ್ಣು-3 |
ವಿದ್ಯಾರ್ಹತೆ : | ಎಂ.ಎ., ಪಿ.ಹೆಚ್.ಡಿ |
ವೃತ್ತಿ : | ನಿವೃತ್ತ ಉಪ ಕುಲಪತಿಗಳು(ಪ್ರಾಧ್ಯಾಪಕರು) |
ಮೊಬೈಲ್ : | 94483-80824 |
ಹೊಂದಿರುವ ಸ್ಥಾನಮಾನಗಳು : | 2004-2010 ಸದಸ್ಯರು, ವಿಧಾನ ಪರಿಷತ್ತು 1991-1998: ಸಂಸ್ಥಾಪಕ-ಉಪ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ 1983-1987: ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ 1986: ಉಪಾಧ್ಯಕ್ಷರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿ, ನವದೆಹಲಿ 1996-2000: ಅಧ್ಯಕ್ಷರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿ, ನವದೆಹಲಿ 1980-1983: ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ 1980-1983: ಸದಸ್ಯರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ 1987-1991: ಸದಸ್ಯರು, ‘ರಂಗಾಯಣ’ ಕರ್ನಾಟಕ ನಾಟಕ ಕೃತಿಗಳ ಸಂಗ್ರಹಾಲಯ, ಮೈಸೂರು 1988: ಸದಸ್ಯರು, ಸಾಹಿತ್ಯ ಅಕಾಡೆಮಿ, ನವದೆಹಲಿ 1992 ರಿಂದ 1998: ಸದಸ್ಯರು, ಸಂಗೀತ ನಾಟಕ ಅಕಾಡೆಮಿ ನವದೆಹಲಿ ಕಾರ್ಯಕಾರಿ: ಸಾಹಿತ್ಯ ಅಕಾಡೆಮಿ, ನವದೆಹಲಿ, (1992 ರಿಂದ 1998), ಡಾ. ಚಂದ್ರಶೇಖರ ಬ. ಕಂಬಾರ ಕನ್ನಡದ ಒಬ್ಬ ಪ್ರಮುಖ ಕವಿ, ನಾಟಕಕಾರ ಹಾಗೂ ಜಾನಪದ ತಜ್ಞ. ಇವರು ಜಾನಪದ, ನಾಟಕ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ 21 ನಾಟಕಗಳು, 8 ಕವನ ಸಂಕಲನಗಳು, 3 ಕಾದಂಬರಿಗಳು ಮತ್ತು 12 ಸಂಶೋಧನಾ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಚಕೋರಿ ಎಂಬ ಮಹಾಕಾವ್ಯವನ್ನೂ ಸಹ ಪ್ರಕಟಿಸಿದ್ದಾರೆ. ಚಿಕಾಗೋ ವಿಶ್ವವಿದ್ಯಾನಿಲಯ, ನ್ಯೂಯರ್ಕ್ ನ ಅಮೆರಿಕನ್ ಓರಿಯಂಟಲ್ ಸೆಂಟರ್, ಬರ್ಲಿನ್(ಜೆ.ಡಿ.ಆರ್ ನಲ್ಲಿರುವ ಅಂತರಾಷ್ಟ್ರಿಯ ರಂಗ ಸಂಸ್ಥೆ, ಮಾಸ್ಕೊ(ಯು.ಎಸ್.ಎಸ್.ಆರ್),ಜೇಡ್, ಅಕಿತಾ,ಜಪಾನ್, ಬಹಳಷ್ಟು ಭಾರತೀಯ ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಮತ್ತು ಇತರ ಸಂಸ್ಥೆಗಳು-ಇಲ್ಲೆಲ್ಲಾ ಇವರು ಭಾರತೀಯ ಜಾನಪದ ಮತ್ತು ರಂಗಕಲೆಗೆ ಸಂಬಂಧಪಟ್ಟ ಪ್ರಬಂಧಗಳನ್ನು ಮಂಡಿಸಿದ್ದಾರೆ. ಭರೆದ ಬರಹಗಾರರ ನಿಯೋಗದ ಸದಸ್ಯರರಾಗಿ ಚೀನಾ ದೇಶಕ್ಕೆ ಭೇಟಿ ನೀಡಿದ್ದಾರೆ. ಫ್ರಾನ್ಸ್ ನಲ್ಲಿ 1998ರಲ್ಲಿ ನಡೆದ ಬೀದಿ ನಾಟಕೋತ್ಸವವನ್ನು ವಿಕ್ಷಿಸಲು ಫ್ರೆಂಚ್ ಸರ್ಕಾರ ಇವರನ್ನು ಆಹ್ವಾನಿಸಿತ್ತು. 1984ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದರು. ಇವರ ನಾಟಕಗಳು ಬಹಳಷ್ಟು ಭಾಷೆಗೆ ಅನುವಾದಗೊಂಡು ಪ್ರದರ್ಶಿತಗೊಂಡಿವೆ ಮತ್ತು ಇವರ ನಾಟಕಗಳು ಆಂಗ್ಲ ಭಾಷೆಯಲ್ಲಿ ಸೀಗಲ್ ಬುಕ್ಸ್, ಕಲ್ಕತ್ತಾ, ಇವರಿಂದ ಪ್ರಕಟಿತವಾಗಿವೆ. ಇವರ ಮಹಾಕಾವ್ಯ ಆಂಗ್ಲ ಭಾಷೆಗೆ ಅನುವಾದಗೊಂಡು ಅದನ್ನು ಪೆಂಗ್ವಿನ್ ಬುಕ್ಸ್-ಇವರು ಪ್ರಕಟಿಸಿದ್ದಾರೆ. ಖ್ಯಾತ ನಿರ್ದೇಶಕರು, ದೇಶದ ವಿವಿಧ ಕೇಂದ್ರಗಳಲ್ಲಿ ಇವರ ನಾಟಕಗಳನ್ನು ನಿರ್ದೇಶಿಸಿದ್ದಾರೆ. 1993ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ರಾಜ್ಯ ಮಟ್ಟದ ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ. 1985 ಮತ್ತು 1996ರ ವಿಶ್ವಕಾವೋತ್ಸವದಲ್ಲಿ ಭಾಗವಹಿಸಿರುತ್ತಾರೆ. |
ಪ್ರಶಸ್ತಿಗಳು ಮತ್ತು ಗೌರವಗಳು : | ಇವರ ಐದು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ ಸುಪ್ರಸಿದ್ಧ ನಾಟಕವಾದ ‘ಜೋಕುಮಾರಸ್ವಾಮಿ; 1975ರಲ್ಲಿ ವರ್ಷದ ಅತ್ಯುತ್ತಮ ನಾಟಕವೆಂದು ಬಿರುದಾಂಕಿತಗೊಂಡು ‘ನಾಟ್ಯ ಸಂಘ’ ನೀಡುವ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದುಕೊಂಡಿದೆ. ಇವರ ಮತ್ತೊಂದು ನಾಟಕ ‘ಜೈಸಿದನಾಯಕ’ ಕರ್ನಾಟಕದಲ್ಲಿ1975ನೇ ವರ್ಷದ ಅತ್ಯುತ್ತಮ ಪುಸ್ತಕವೆಂಬ ಕೀರ್ತಿಗೆ ಪಾತ್ರವಾಗಿ ‘ವರ್ಧಮಾನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇವರ ಸಾವಿರದ ನೆರಳು’ ಕೃತಿ 1982ರಲ್ಲಿ ಅತ್ಯುತ್ತಮ ಕವನ ಸಂಕಲನವೆಂಬ ಕಾರಣಕ್ಕಾಗಿ ಕೇರಳ ಸರ್ಕಾರದಿಂದ ‘ಆಶನ್ ಅವಾರ್ರ್ಡ’ ಪಡೆದುಕೊಂಡಿದೆ. ನಾಟಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರು ಕೆ.ವಿ.ಶಂಕರೇಗೌಡ ಪ್ರಶಸ್ತಿಯನ್ನು 1990ರಲ್ಲಿ ಪಡೆದುಕೊಂಡಿದ್ದಾರೆ. ನಾಟಕ ರಚನೆಗಾಗಿ 1983ರಲ್ಲಿ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ ಮತ್ತು ಸಿರಿಸಂಪಿಗೆ ನಾಟಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ (ನವದೆಹಲಿ) ಪ್ರಶಸ್ತಿ ಲಭಿಸಿದೆ.
ಅಭಿನಂದನೆಗಳು: ಇವರು ಐದು ಚಲನಚಿತ್ರಗಳನ್ನು ಹಾಗೂ ಬಹಳಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಆರು ಚಲನಚಿತ್ರಗಳಿಗೆ, ಬಹಳಷ್ಟು ಸಾಕ್ಷ್ಯಚಿತ್ರಗಳಿಗೆ ಹಾಗೂ ದೂರದರ್ಶನದ ಧಾರಾವಾಹಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ‘ಕಾಡು ಕುದುರೆ’ 1987ರಲ್ಲಿ ಭಾರತೀಯ ಪನೋರಮ’ ಗೆ ಪ್ರವೇಶ ಪಡೆದು ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಅವರ ಚಲನಚಿತ್ರ ‘’ಸಂಗೀತ’’ 1981ರಲ್ಲಿ ರಾಜ್ಯಮಟ್ಟದ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಮತ್ತು ಇವರು ಕೆಳಕಂಡ ಪ್ರಶಸ್ತಿಗಳನ್ನೂ ಸಹ ಪಡೆದುಕೊಂಡಿದ್ದಾರೆ.
ಇವರು 1968-69ನೇಸಾಲಿನಲ್ಲಿ ಅತ್ಯಂತ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. 1984-86ನೇ ಸಾಲಿನಲ್ಲಿ ಸಾಂಪ್ರದಾಯಿಕ/ಜಾನಪದ ಕಲೆಗಳು ಹಾಗೂ ಆಧುನಿಕ ನಾಟಕಗಳು ನಡುವಿನ ಸಂಬಂಧಾಂತರಗಳನ್ನು ಕುರಿತು ವಿಷಯ ಮಂಡನೆಗಾಗಿ ಫೋರ್ಡ್ ಫೆಲೋಶಿಫ್ ಪಡೆದುಕೊಂಡಿದ್ದಾರೆ. ಇವರ ಪ್ರಕಟಿತ ಪುಸ್ತಕಗಳು:- ಕಾವ್ಯ:-
(ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ)
ನಾಟಕಗಳು
ಈ ಕೃತಿಗೆ ಭಾರತದಲ್ಲಿ 1975ನೇ ವರ್ಷದ ಅತ್ಯುತ್ತಮ ನಾಟಕವೆಂದ ಆಯ್ಕೆಯಾಗಿ ಶ್ರೀಮತಿ ಕಮಲಾದೇವಿ ಚಟ್ಟೋಪಾದ್ಯಾಯ’ ಪ್ರಶಸ್ತಿ, ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿರುತ್ತದೆ.
(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕದಲ್ಲಿ ವರ್ಷದ ಅತ್ಯುತ್ತಮ ಪುಸ್ತಕವೆಂಬ ಕಾರಣಕ್ಕೆ ವರ್ಧಮಾನ ಪ್ರಶಸ್ತಿಯೂ ಈ ಕೃತಿಗೆ ಲಭಿಸಿದೆ)
ಕಾದಂಬರಿಗಳು ಮತ್ತು ಕಥೆಗಳು:-
(ದೂರದರ್ಶನಕ್ಕಾಗಿ ಚಿತ್ರೀಕರಸಿಲಾಗಿದೆ)
(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1982) -1982 ಸಂಶೋಧನೆ:
(ಎರಡು ಸಂಪುಟಗಳು)-1985
ನಾಟಕಗಳ ಒಂದು ಸಂಕಲನ-2000 |