ಇತರೆ ಮಾಹಿತಿ : |
1. ಗ್ರಾಮೀಣಾಭಿವೃದ್ಧಿ,ಸಹಕಾರ ಮತ್ತು ನ್ಯಾಯಾಂಗ ಕ್ಷೇತ್ರಗಳಲ್ಲಿನ ಅನುಭವ :
-
1978-1983 ಸದಸ್ಯರು, ಗ್ರಾಮ ಪಂಚಾಯತ್, ವೇಮಗಲ್.
-
1980-81 ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ, ವೇಮಗಲ್, ಕೋಲಾರ ಜಿಲ್ಲೆ.
-
1983-85 ಸದಸ್ಯರು, ನೇಮಕಾತಿ ಸಮಿತಿ, ನ್ಯಾಯಾಂಗ ಇಲಾಖೆ, ಉಚ್ಚ ನ್ಯಾಯಾಲಯ, ಕರ್ನಾಟಕ.
2. ರಾಜಕೀಯ ಅನುಭವ :
-
1985-1986 ಸಂಚಾಲಕ, ರಾಜ್ಯ ಯುವ ಜನತಾ ಪಕ್ಷ.
-
1986-1988 ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಜನತಾ ಪಕ್ಷ.
-
1988-1990 ಪ್ರಧಾನ ಕಾರ್ಯದರ್ಶಿ, ಜನತಾದಳ ಶಾಸಕಾಂಗ ಪಕ್ಷ.
-
1988-1994 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
-
1994-2000 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
-
2000-2006 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
- 2008-2009 ಸಂಚಾಲಕ, ಚುನಾವಣಾ ಪ್ರಚಾರ ಸಮಿತಿ.
-
1997-2004 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಬೇರೆ ಬೇರೆ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ; ಪ್ರಧಾನ ಕಾರ್ಯದರ್ಶಿ, ಪಕ್ಷದ ವಕ್ತಾರರು ಮತ್ತು ಸದಸ್ಯರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ವಸ್ತು ಪ್ರದರ್ಶನ ಸಮಿತಿ, ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನ.
3. ಹೊಂದಲಾದ ಸ್ಥಾನಮಾನಗಳು :
-
07-08-2003 ಉಪ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು.
-
14-02-2004 ಹಂಗಾಮಿ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು.
-
17-03-2005 ರಿಂದ 17-06-2006 ರವರೆಗೆ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು.
4. ಶಾಸಕಾಂಗದ ಅನುಭವ :
-
ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಾರ್ವಜನಿಕ ಉದ್ಯಮಗಳ ಸಮಿತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಅಧೀನ ಶಾಸಕ ರಚನಾ ಸಮಿತಿ, ಭರವಸೆಗಳ ಸಮಿತಿ, ಕಾರ್ಯಕಲಾಪಗಳ ಸಲಹಾ ಸಮಿತಿ-ಇವುಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
-
ವಿರೋಧ ಪಕ್ಷದ ಸಚೇತಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖಾ ವಿಷಯ ಸಮಿತಿಯ ಅಧ್ಯಕ್ಷರಾಗಿ ಹಾಗೂ ಹಣಕಾಸು, ಯೋಜನಾ ಇಲಾಖಾ ವಿಷಯ ಸಮಿತಿ, ಕಂದಾಯ, ಅರಣ್ಯ ಮತ್ತು ಪರಿಸರ ಇಲಾಖಾ ವಿಷಯ ಸಮಿತಿ, ಗೃಹ ಮತ್ತು ಸಾರಿಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖಾ ವಿಷಯ ಸಮಿತಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖಾ ವಿಷಯ ಸಮಿತಿ-ಇವುಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
5. ವಿಶ್ವವಿದ್ಯಾಲಯ ಶಿಕ್ಷಣದಲ್ಲಿನ ಅನುಭವ :
6. ಪರಿಶೀಲನಾ ಸಮಿತಿಯ ಸದಸ್ಯರಾಗಿ ಸೇವೆ :
-
ನೀರಾವರಿಗೆ ಸಂಬಂಧಪಟ್ಟ ಜಲ ನೀತಿ ಕರಡು ಸಮಿತಿ.
-
ಕರ್ನಾಟಕ ಲೋಕಾಯುಕ್ತ ವಿಧೇಯಕದ ಮೇಲಣ ಜಂಟಿ ಪರಿಶೀಲನಾ ಸಮಿತಿ.
-
ಗ್ರಾಮೀಣಾಭಿವೃದ್ಧಿ.
-
ಗ್ರಾನೈಟ್ ನೀತಿ.
-
ಖರೀದಿ ನೀತಿ.
-
ಔಷಧ ಖರೀದಿ ನೀತಿ- ಆರೋಗ್ಯ ಇಲಾಖೆ.
7. ಭಾಗವಹಿಸಲಾದಂತಹ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳು
-
1997-1998 ರಲ್ಲಿ ಕೇರಳದ ತಿರುಚಿಯಲ್ಲಿ ರಾಜೀವಗಾಂಧಿ ಫೌಂಡೇಶನ್ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಕುರಿತ ವಿಚಾರ ಸಂಕಿರಣ.
-
2001 ರಲ್ಲಿ ಚೆನ್ನೈನಲ್ಲಿ "ದ ಹಿಂದೂ" - ಸತ್ಯಮೂರ್ತಿ ಫೌಂಡೇಶನ್ ಆಫ್ ಇಂಡಿಯಾದವರು ಆಯೋಜಿಸಿದ್ದ ವಿಚಾರ ಸಂಕಿರಣ.
-
2003 ರಲ್ಲಿ ಬೆಂಗಳೂರಿನ ಜೆ.ಆರ್.ಡಿ. ಟಾಟಾ ಆಡಿಟೋರಿಯಮ್‌ನಲ್ಲಿ ಆಯೋಜಿಸಿದ್ದ ಸಿ.ಇ.ಡಿ.ಎ.ಡಬ್ಲ್ಯೂ. ಕಾರ್ಯಕ್ರಮ.
8. ಭಾಗವಹಿಸಲಾದಂತಹ ಶಾಸಕಾಂಗದ ಸಮಾವೇಶಗಳು, ವಿಚಾರ ಸಂಕಿರಣಗಳು ಮತ್ತು ಸಂದರ್ಶಿಸಲಾದ ದೇಶಗಳು:
-
1994ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಮುಖ್ಯ ಸಚೇತಕರ ಸಮಾವೇಶ.
-
2003ರಲ್ಲಿ ನವ ದೆಹಲಿಯಲ್ಲಿ ನಡೆದ ಹೆಚ್.ಐ.ವಿ. ಏಡ್ಸ್ ಬಗೆಗಿನ ರಾಷ್ಟ್ರೀಯ ವಿಚಾರ ಸಂಕಿರಣ
-
2004ರಲ್ಲಿ ಕೋಲ್ಕತ್ತಾದ ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ.
-
2004 ರಲ್ಲಿ ಇಂಗ್ಲೆಂಡ್ ದೇಶದ ಲಂಡನ್ ನಗರದಲ್ಲಿ 3 ದಿನಗಳ ಕಾಲ ಹೌಸ್ ಆಫ್ ಕಾಮನ್ಸ್ ಹಾಗೂ ಹೌಸ್ ಆಫ್ ಲಾಡ್ಸ್‌ನಲ್ಲಿ ನಡೆದ "ಅಟ್ಯಾಚ್‌ಮೆಂಟ್ ಪ್ರೋಗ್ರಾಂ".
-
2004ರಲ್ಲಿ ಹೈದರಾಬಾದ್‌ನಲ್ಲಿ ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಭಾರತ ಮತ್ತು ಏಷಿಯಾ ಪ್ರಾದೇಶಿಕ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್ ಸಮ್ಮೇಳನ.
-
2005ರಲ್ಲಿ ಯು.ಎಸ್.ಎನ್ ಸೀಟೆಲ್‌ನಲ್ಲಿ ನಡೆದ ರಾಜ್ಯ ವಿಧಾನ ಮಂಡಲಗಳ ರಾಷ್ಟ್ರೀಯ ಸಮ್ಮೇಳನ.
-
2005ರಲ್ಲಿ ಫಜಿ ಐಲೆಂಡ್ಸ್‌ನ ನಾಡಿಯಲ್ಲಿ ನಡೆದ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಕಾನ್‌ಫರೆನ್ಸ್.
-
2009ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯೊಂದಿಗೆ ಜರ್ಮನಿ, ಇಟಲಿ, ಸ್ವಿಟ್ಸ್‌ರ್‌ಲ್ಯಾಂಡ್, ಫ್ರಾನ್ಸ್, ಹಾಲೆಂಡ್ ದೇಶಗಳಲ್ಲಿ ಪ್ರವಾಸ.
9. ಇತರೆ ಮಾಹಿತಿ :
-
ನನ್ನ ತಂದೆಯವರಾದ ದಿ: ವಿ. ಎಸ್. ರಾಮಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಸರ್ಕಾರಿ ಶಾಲೆಗಳಿಗೆ, ಕಾಲೇಜುಗಳಿಗೆ, ಹಾಸ್ಟೆಲ್‌ಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ 50 ಎಕರೆ ಜಮೀನನ್ನು ದೇಣಿಗೆಯಾಗಿ ನೀಡಿರುತ್ತಾರೆ.
-
ಇವರು ಉತ್ತಮ ಸಮಾಜ ಸೇವಕರಾಗಿದ್ದರು.
|