HOME

BIO-DATA

ಶ್ರೀ ಎಚ್. ಎಮ್. ರೇವಣ್ಣ.
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು.
(ವಿಧಾನಸಭೆಯಿಂದ ಚುನಾಯಿತರಾದವರು - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಮನೆ ವಿಳಾಸ: ನಂ. 125 1 ನೇ, ಮುಖ್ಯರಸ್ತೆ, 2 ನೇ ಹಂತ ,ಮಹಾಲಕ್ಷ್ಮಿಪುರಂ ,ಪಶ್ಚಿಮದ ರಸ್ತೆ ಬೆಂಗಳೂರು - 560086
ಹುಟ್ಟಿದ ದಿನಾಂಕ : 08.11.1949 
ಜನ್ಮ ಸ್ಥಳ: ಹೊಸಪೇಟೆ, ಮಾಗಡಿ ಟೌನ್, ರಾಮನಗರ ಜಿಲ್ಲೆ.
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ವತ್ಸಲಾ ರೇವಣ್ಣ.
ತಂದೆಯ ಹೆಸರು:  ದಿ: ಮಾಗಡಯ್ಯ
ಮಕ್ಕಳು: ಗಂಡು-2
ವಿದ್ಯಾರ್ಹತೆ: ಬಿ.ಎಸ್ಸಿ.
ಮೊಬೈಲ್ ಸಂಖ್ಯೆ : 9901184466

ಇತರೆ ಮಾಹಿತಿಗಳು :

ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣಮತ್ತುಪದವಿ ಪೂರ್ವ ಶಿಕ್ಷಣವನ್ನು ಮಾಗಡಿ ಟೌನ್‍ನಲ್ಲಿ ಮುಗಿಸಿ, ಬಿ.ಎಸ್ಸಿ., ಪದವಿಯನ್ನು ಬೆಂಗಳೂರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಡೆದಿರುತ್ತಾರೆ. ವಿದ್ಯಾರ್ಥಿ ನಾಯಕರಾಗಿ ಈ ಕೆಳಕಂಡ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿರುತ್ತಾರೆ.
1.ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ.
2. ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ.
3.ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷರಾಗಿ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ., (ಸಂಖ್ಯಾಶಾಸ್ತ್ರ) ವ್ಯಾಸಂಗ ಮಾಡುವಾಗ ಕಾಲೇಜಿನ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗಾಗಿ ಸೇವೆ ಸಲ್ಲಿಸಿರುತ್ತಾರೆ. ವಿದ್ಯಾರ್ಥಿ ನಾಯಕರಾಗಿದ್ದ ಸಂದರ್ಭದಲ್ಲಿ ಅನೇಕ ಚಳುವಳಿಗಳ ನೇತೃತ್ವವನ್ನು ಸಹ ವಹಿಸಿರುತ್ತಾರೆ.

ಕ್ರೀಡಾ ಮತ್ತು ಸಾಂಸ್ಕಂತಿಕ ಚಟುವಟಿಕೆ:
ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದಾಗ ಉತ್ತಮ ಎನ್.ಸಿ.ಸಿ ಕೆಡೆಟ್ ಆಗಿ ಪರ್ವತಾರೋಹಣ ಶಿಬಿರವನ್ನು ಡಾರ್ಜಲಿಂಗ್‍ನ ಹಿಮಾಲಯದ ತೇನ್ಸಿಂಗ್ ಮೌಂಟನಿಯರಿಂಗ್ ಇನ್ಸ್‍ಸ್ಟಿಟ್ಯೂಟ್‍ನಲ್ಲಿ ಒಂದು ತಿಂಗಳ ತರಬೇತಿಯನ್ನು ಪಡೆದಿರುತ್ತಾರೆ. ಆದಿಚುಂಚನಗಿರಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಸಮ್ಮುಖದಲ್ಲಿ ನಡೆದ 10 ದಿನಗಳ ಎನ್.ಎಸ್.ಎಸ್ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಶ್ರಮದಾನ ಮಾಡಿರುತ್ತಾರೆ. ಕಾಲೇಜು ದಿನಗಳಲ್ಲಿ ಉತ್ತಮ ಕಬಡ್ಡಿ ಪಟುವಾಗಿ ವಿಶ್ವವಿದ್ಯಾನಿಲಯದ ಆಟಗಾರರಾಗಿ ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ದಕ್ಷಿಣ ವಲಯ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತಾರೆ. ಮಾಗಡಿ ಕೆಂಪೇಗೌಡ ಕಬಡ್ಡಿ ತಂಡವನ್ನು ಕಟ್ಟಿ ರಾಜ್ಯ ಮಟ್ಟದ ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಮಾಗಡಿಗೆ ಕೀರ್ತಿಯನ್ನು ತಂದಿರುತ್ತಾರೆ. ನಂತರ ರಾಜ್ಯ ಮಟ್ಟದ ಕಬಡ್ಡಿ ಆಟಗಾರರಾಗಿ ಅನೇಕ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಮಾಗಡಿ ತಾಲ್ಲೂಕಿನಲ್ಲಿ ದಿ:ಶ್ರೀಮತಿ ಇಂದಿರಾಗಾಂಧಿ ಸ್ಮಾರಕ ರಾಜ್ಯಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ನಡೆಸಿ ಯುವ ಜನತೆಯ ಮನಗೆದ್ದಿದ್ದಾರೆ. ಮಾಗಡಿ ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿರುತ್ತಾರೆ. ಮಾಗಡಿಯಲ್ಲಿ ಜ್ಯೋತಿ ಕಲಾವೃಂದದ ಆಶ್ರಯದಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ನಡೆಸಿರುತ್ತಾರೆ. ಪ್ರಥಮ ಬಾರಿಗೆ ರಾಜ್ಯಮಟ್ಟದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಮಾಗಡಿಯಲ್ಲಿ ಆಚರಿಸಲು ಕಾರಣರಾಗಿದ್ದಾರೆ.
ವಿದೇಶ ಪ್ರವಾಸ: 1990ನೇ ವರ್ಷದಲ್ಲಿ ಚೀನಾ ದೇಶದ ಬೀಜಿಂಗ್‍ನಲ್ಲಿ ನಡೆದ ಏಷ್ಯಾ ಕ್ರೀಡಾ ಕೂಟದಲ್ಲಿ ತಾಂತ್ರಿಕ ಸದಸ್ಯರಾಗಿ ಭಾಗವಹಿಸಿರುತ್ತಾರೆ. ಇದೇ ಸಮಯದಲ್ಲಿ ಹಾಂಕಾಂಗ್, ಬ್ಯಾಂಕಾಂಕ್ ಮಖಾವೋ ರಾಷ್ಟ್ರಗಳಿಗೆ ಭೇಟಿ ನೀಡಿರುತ್ತಾರೆ. 2003ನೇ ವರ್ಷದಲ್ಲಿ ಯೂರೋಪ್ ದೇಶಗಳಾದ ಜರ್ಮನಿ, ಹಾಲೆಂಡ್, ಫ್ರಾನ್ಸ್, ಇಂಗ್ಲೆಂಡ್ ದೇಶಗಳಲ್ಲಿ ಪ್ರವಾಸ ಮಾಡಿ ಹೆಚ್ಚಿನ ತಾಂತ್ರಿಕತೆ, ಕುರಿ ಮತ್ತು ಹೈನುಗಾರಿಕೆ ಅಭಿವೃದ್ಧಿ ಬಗ್ಗೆ ಅಧ್ಯಯನ ನಡೆಸಿರುತ್ತಾರೆ.
ಸಹಕಾರ ಕ್ಷೇತ್ರ ಮತ್ತು ಸಂಘ ಸಂಸ್ಥೆಗಳು: 1. ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
2. ಅಶೋಕನಗರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
3. ರೇಷ್ಮೆ ಇಲಾಖೆಯ ಬಿತ್ತನೆ ವಲಯದ ಹಂಗಾಮಿ ನೌಕರರ ಸಂಘದ ಅಧ್ಯಕ್ಷರಾಗಿ ಹಂಗಾಮಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮವಹಿಸಿರುತ್ತಾರೆ.
4. ಕೆ.ಜಿ.ಐ.ಡಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಶ್ರಮಿಸಿರುತ್ತಾರೆ
5. ಸರ್ಕಾರಿ ಸಾಬೂನು ಕಾರ್ಖಾನೆಯ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ.
 ರಾಜಕೀಯ ಚಟುವಟಿಕೆ:
1.ವಿದ್ಯಾರ್ಥಿ ನಾಯಕರಾಗಿ ಪ್ರಾರಂಭವಾದ ರಾಜಕೀಯ ಜೀವನ ಮಾಗಡಿ ತಾಲ್ಲೂಕಿನ ಯುವ ಕಾಂಗ್ರೆಸ್‍ನ ಅಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ನಂತರ ತಾಲ್ಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗಿ (ಎ.ಐ.ಸಿ.ಸಿ ಸದಸ್ಯರು) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಮಾಗಡಿ ಪುರ ಸಭೆಯ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಮಾಗಡಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸಿರುತ್ತಾರೆ. 1989ರಲ್ಲಿ ನಡೆದ 9ನೇ ವಿಧಾನ ಸಭಾ ಚುನಾವಣೆಯಲ್ಲಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾಗಿ, ತದನಂತರ.
2.ಶ್ರೀ ವೀರಪ್ಪ ಮೊಯಿಲಿಯವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ನಂತರ ಸಚಿವ ಸಂಪುಟವನ್ನು ಪುನರ್ ರಚಿಸಿದಾಗ ರಾಜ್ಯದ ಕೃಷಿ ಸಚಿವರಾಗಿ ಕೃಷಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶ್ರೀಸಾಮಾನ್ಯರಿಂದ ನೇರವಾಗಿ ಪಡೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಕೃಷಿ ಇಲಾಖೆಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿರುತ್ತಾರೆ. ಇವರ ಸೇವೆಯನ್ನು ಗಮನಿಸಿದ ಆಲ್ ಇಂಡಿಯಾ ಅಚಿವರ್ಸ್ ಕಾನ್ಫರೆನ್ಸ್ ನ್ಯೂ ಡೆಲ್ಲಿ ಇವರು ವಿಶೇಷ ಗೌರವ ಪ್ರಶಸ್ತಿ-93ನ್ನು ನೀಡಿ ಗೌರವಿಸಿರುತ್ತಾರೆ. 1999ರಲ್ಲಿ ನಡೆದ 11ನೇ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ. ಕೃಷ್ಣರವರ ಸಚಿವ ಸಂಪುಟದಲ್ಲಿ ರೇಷ್ಮೆ ಮತ್ತು ಜವಳಿ ಖಾತೆ ಸಚಿವರಾಗಿ, ರೇಷ್ಮೆ ಮತ್ತು ಜವಳಿ ಇಲಾಖೆಯ ಪುನರ್ ಸಂಘಟನೆ, ರೇಷ್ಮೆ ಕೃಷಿ ರೈತರ ರೇಷ್ಮೆ ಗೂಡುಗಳಿಗೆ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯಲು ಕ್ರಮ ಹಾಗೂ ನೇಕಾರರಿಗೆ ಹಲವಾರು ಸವಲತ್ತುಗಳನ್ನು ಒದಗಿಸುವಲ್ಲಿ ಕ್ರಮವನ್ನು ಕೈಗೊಂಡಿರುತ್ತಾರೆ.

ಹವ್ಯಾಸ :  ಕ್ರೀಡೆ (ಕಬ್ಬಡಿ)
ಇ-ಮೇಲ್ :
hmrevanna8@gmail.com