HOME

BIO-DATA

ಡಾ: ದೊಡ್ಡರಂಗೇಗೌಡ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ನಾಮ ನಿರ್ದೇಶನ ಹೊಂದಿದವರು)
(ಭಾರತೀಯ ಜನತಾಪಕ್ಷ)

ಮನೆ ವಿಳಾಸ : "ಶ್ರೀ ಸನ್ನಿಧಿ", ಸಂ.140, 3ನೇ ಮುಖ್ಯರಸ್ತೆ, ಕತ್ತರಿಗುಪ್ಪೆ(ಪೂರ್ವ), ಬನಶಂಕರಿ 3ನೇ ಹಂತ, ಬೆಂಗಳೂರು-560085
ಜನ್ಮ ದಿನಾಂಕ : 07-02-1946
ಜನ್ಮ ಸ್ಥಳ : ಕುರುಬರಹಳ್ಳಿ ಗ್ರಾಮ, ಮಧುಗಿರಿ(ತಾ), ತುಮಕೂರು ಜಿಲ್ಲೆ.
ತಂದೆಯ ಹೆಸರು : ದಿವಂಗತ ಕೆ.ರಂಗೇಗೌಡ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಡಾ: ಕೆ. ರಾಜೇಶ್ವರಿ
ಮಕ್ಕಳು : ಗಂಡು-1, ಹೆಣ್ಣು-1
ವಿದ್ಯಾರ್ಹತೆ : ಎಂ.ಎ. ಪಿ.ಹೆಚ್.ಡಿ.
ದೂರವಾಣಿ ಸಂಖ್ಯೆ : 080-26695454
ಮೊಬೈಲ್‌ : 9900253495
ಹೊಂದಿರುವ ಸ್ಥಾನಮಾನಗಳು : 21.06.2008ರಿಂದ 20.06.2014   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹವ್ಯಾಸಗಳು : ಬರಹ, ಚಲನಚಿತ್ರ, ಗೀತ ರಚನೆ ಮತ್ತು ಕಲೆ
ಇತರೆ ಮಾಹಿತಿಗಳು : ಇದುವರೆಗೆ 61 ಕೃತಿಗಳ ಪ್ರಕಟಣೆ, 5ಬಾರಿ ರಾಜ್ಯ ಸರ್ಕಾರದ ಪ್ರಶಸ್ತಿ.ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ… ಹೀಗೆ ಹಲವು ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಳ್ಳುವಿಕೆ.ನಿರಂತರವಾಗಿ ಮೌಲಿಕ ಪುಸ್ತಕಗಳ ಪ್ರಕಟಣೆ, ನಾಡು-ನುಡಿಯ  ಹಿರಿಮೆಯ ಬಗೆಗೆ ಪ್ರಬುದ್ಧ ಉಪನ್ಯಾಸಗಳ ನೀಡಿಕೆ, ಸಾಹಿತ್ಯಿಕ,ಸಾಂಸ್ಕೃತಿಕ ಪರಿಚಾರಿಕೆ,
    ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ
ಕುರುಬರಹಳ್ಳಿ ಬಡವನಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಲ್ಲಿ ವಿದ್ಯಾಬ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಆನರ‍್ಸ್ ಪದವಿ, 1972ರಲ್ಲಿ ಎಂ.ಎ ಪದವಿ . 2004ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ  ಡಾಕ್ಟರೇಟ್ ಪದವಿ.(ವಿಷಯ: ಕನ್ನಡ ನವೋದಯ ಕಾವ್ಯ(ಒಂದು ಪುನರ್‌ ಮೌಲ್ಯಮಾಪನ)

     1972ರ ಜೂನ್ 18ರಂದು ಬೆಂಗಳೂರು ನಗರದ ಎಸ್.ಎಲ್.ಎನ್. ಕಲೆ. ವಾಣಿಜ್ಯ ವಿಜ್ಷಾನ ಕಾಲೇಜಿನಲ್ಲಿ  ಕನ್ನಡ  ಅಧ್ಯಾಪಕರಾಗಿ ಕೆಲಸಕ್ಕೆ ಸೇರಿ  1980ರಲ್ಲಿ ಕನ್ನಡ ಪ್ರವಾಚಕರಾಗಿ, 1985ರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, 1990ರಿಂದ  ಕನ್ನಡ   ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ.  ಪ್ರಸ್ತುತ ಶೇಷದ್ರಿಪುರಂ ಕಾಲೇಜಿನಲ್ಲಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ನಿವೃತ್ತಿ.  ಪ್ರಸ್ತುತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ.

ವಿದ್ಯಾರ್ಥಿ ದೆಸೆಯಿಂದ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದು ಇದುವರೆಗೆ 56ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಚಿರಸ್ಥಾಯಿ.  ಇದುವರೆಗೆ 500 ಕ್ಕೂ ಮಿಕ್ಕು ಕನ್ನಡ ಚಲನಚಿತ್ರ ಗೀತೆಗಳನ್ನು ಬರೆದು ನಾಡಿನಲ್ಲಿ ಮನೆಮಾತು.

ಪ್ರಕಟಿತ ಕೃತಿಗಳು
ಭಾವಗೀತೆಗಳು
1. ಗೀತಗಾರುಡಿ
2. ಹೋಳಿ ಹುಣ್ಣಿಮೆ
3. ಪ್ರೇಮಾಂಜಲಿ
4. ತೀರದ ತುಡಿತ
5. ಸಪ್ತಶೃಂಗ
6. ಕನ್ಯಾ ಕಲ್ಯಾಣಿ
7. ಮಾವು-ಬೇವು
8. ತಾಳ-ಮೇಳ
9. ಗೀತ ಗಂಗೋತ್ರಿ
10. ರಾಗ ತರಂಗಿಣಿ
11. ಗೀತ-ವೈಭವ
12. ರಾಗಮುಖಿ
13. ಭಾವಭಾಗೀರಥಿ
14. ಹೂವು-ಹಣ್ಣು
15. ಪ್ರೇಮ ಪಲ್ಲಕ್ಕಿ

ನವ್ಯ ಕಾವ್ಯ ಕೃತಿಗಳು
1. ಜಗಲಿ ಹತ್ತಿ ಇಳಿದು
2. ಕಣ್ಣು ನಾಲಗೆ ಕಡಲು
3. ನಾಡಾಡಿ
4. ಮೌನ ಸ್ಪಂದನ
5. ಏಳು ಬೀಳಿನ ಹಾದಿ
6. ಕುದಿಯುವ ಕುಲುಮೆ
7. ಚದುರಂಗದ ಕುದುರೆಗಳು
8. ಯುಗವಾಣಿ
9. ಐವತ್ತರ ಐಸಿರಿ
10. ಬದುಕು ತೋರಿದ ಬೆಳಕು
11. ಹೊಸ ಹೊನಲು
12. ಲೋಕಾಯಣ
13. ನಿಕ್ಷೇಪ

ಭಕ್ತಿ ಗೀತೆಗಳು

1. ಶ್ರೀ ಸಿದ್ಧೇಶ್ವರ  ಸ್ತುತಿ
2. ಭಕ್ತಿ ಕುಸುಮಾಂಜಲಿ
3. ನೂರೆಂಟು ನಮನ
4. ಶ್ರೀ ಗುರು ಚರಣದಲ್ಲಿ.
ಪ್ರಗಾಥಗಳು
1. ಪ್ರೀತಿಪ್ರಗಾಥ
2. ಹಳ್ಳಿ ಹುಡುಗಿ ಹಾಡು-ಪಾಡು

ಮುಕ್ತಕಗಳು
1. ಮಣ್ಣಿನ ಮಾತುಗಳು
2. ಮಿಂಚಿನಗೊಂಚಲು
ಗದ್ಯ ಕೃತಿಗಳು
1. ವರ್ತಮಾನದ ವ್ಯಂಗ್ಯದಲ್ಲಿ
2. ವಿಚಾರ ವಾಹಿನಿ
ವಿಮರ್ಶಾ ಕೃತಿಗಳು

  1.   ಸಾಹಿತ್ಯ ಸರಸ್ವತಿ
  2. ಜೀವಂತ ಜಾನಪದ
  3. ಧರ್ಮಮಾರ್ಗ
  4. ಪ್ರಾಚೀನ ಸಾಹಿತ್ಯ
  5. ಅಭಿಜಾತ ಸಾಹಿತ್ಯ
  6. ಆಧುನಿಕ ಸಾಹಿತ್ಯ
  7. ನವ್ಯ ನಿಕಷ
  8. ಪ್ರಸ್ತುತ ಸಾಹಿತ್ಯ
  9. ಅಭಿಮುಖ
  10. ನಮ್ಮ ನಾಡು-ನಮ್ಮ ನುಡಿ
  11. ರಮ್ಯವಾದ
  12. ಕನ್ನಡ ನವೋದಯ ಕಾವ್ಯ
  13. ಅಭಿರುಚಿ
  14. ಅಭ್ಯದಯ
  15. ಅಧ್ಯಯ ಅನಾವರಣ
  16. ಅಕೃತಿ ಮತ್ತು ಅನುಸಂಧಾನ
  17. ಸಾಹಿತ್ಯ ಶರಧಿ
  18. ತವನಿಧಿ
  19. ಅರಿವಿನ ಪರಿಧಿ
  20. ವಾಜ್ಷಾಯ ವಾರಿಧಿ

ಪ್ರವಾಸಾನುಭವ

  1. ಅನನ್ಯ ನಾಡು ಅಮೇರಿಕಾ
  2. ಪಿರಮಿಡ್ಡುಗಳ ಪರಿಸರದಲ್ಲಿ

ನಾಡಿನ ಗಣ್ಯರು, ಸಾಹಿತಿಗಳು, ರಾಜಕಾರಣಿಗಳು, ವಿಮರ್ಶಕರು, ಸಂಗೀತ ಸಂಯೋಜಕರು, ನಿರ್ದೇಶಕರು, ಅಭಿಮಾನಿಗಳು, ವಿದ್ಯಾರ್ಥಿಗಳು ಇದುವರೆಗೆ ಮೂರು ವೈಚಾರಿಕ ಸಂಭವನಾ ಗ್ರಂಥಗಳನ್ನು ಅರ್ಪಿಸಿದ್ದಾರೆ.

  1. ಸೃಜನ ಸಂಪನ್ನ
  2. ಸಮಾಜ ಮುಖಿ
  3. ಸಾಹಿತ್ಯ ಸಂಪದ.

ಡಾ: ದೊಡ್ಡರಂಗೇಗೌಡರ ಅರವತ್ತೈದು ಕನ್ನಡ ಕವಿತೆಗಳು ಹನ್ನೊಂದು ಜನ ಆಂಗ್ಲ ಪ್ರಾಧ್ಯಾಪಕರಿಂದ ಅನುವಾದಿವಾಗಿ The wheel of Time and other poems ಕೃತಿ ರಾಊಪ ತಾಳಿದೆ. ಬಾರತೀಯ ಪ್ರಾದೇಶಿಕ ಭಾಷೆಗಳಿಗೆ ಡಾ; ದೊಡ್ಡರಂಗೇಗೌಡ ಇವರ ಕವಿತೆಗಳು ಅನುವಾದಿತವಾಗಿವೆ.  ತಮಿಳು, ತೆಲುಗು, ಉರ್ದು ಭಾಷೆಗೆ ಗೌಡರ ಕನ್ನಡ ಕವಿತೆಗಳು ಅನುವಾದವಾಗಿ ಆಯಾ ರಾಜ್ಯಗಳಲ್ಲೂ ಜನಪ್ರಿಯತೆ ಪಡೆದಿವೆ. ಇವರ ಮೂರು ರೂಪಕಗಳು ಜನಪ್ರಿಯವಾಗಿವೆ.

  1. ಹಿಮಶ್ವೇತಾ
  2. ಮಯೂರ ದರ್ಶನ
  3. ಚಂದ್ರಗಿರಿ ದರ್ಶನ.

ಕರ್ನಾಟಕ ರಾಜ್ಯ ಸರ್ಕಾರದಿಂದ ಪಡೆದ ಪ್ರಶಸ್ತಿಗಳು

  1. 1982ರಲ್ಲಿ ;ಆಲೆಮನೆ’’ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀಗೆರೆ ಸರ್ಕಾರದಿಂದ ‘’ವಿಶೇಷ ಗೀತೆ ಪ್ರಶಸ್ತಿ” ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ.
  2. 1992ರಲ್ಲಿ ‘’ಗಣೇಶನ ಮದುವೆ’ ಚಿತ್ರಕ್ಕಾಗಿ ಬರೆದ ಕಾವ್ಯಾತ್ಮಕ ಗೀತೆಗೆ ‘’ವರ್ಷದ ಶ್ರೇಷ್ಠ ಗೀತೆ  ಪ್ರಶಸ್ತಿ’ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ.
  3. 1995ರಲ್ಲಿ ‘’ಕಾವ್ಯ’ ಚಿತ್ರದ ಅತ್ಯುತ್ತಮ ಗೀತೆಗೆ’ ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ” ಹಾಗೂ ಬೆಲ್ಳಿ ಪದಕದೊಂದಿಗೆ ಸನ್ಮಾನ.
  4. 1997ರಲ್ಲಿ’’ಜನುಮದ ಜೋಡಿ” ಚಿತ್ರಕ್ಕೆ ಬರೆದ ಜಾನಪದೀಯ ಗೀತೆಗೆ ‘’ ವರ್ಷದ ಶ್ರೇಷ್ಠ’’ ಮತತು ಬೆಳ್ಳಿ ಪದಕದೊಂದಿಗೆ ಪುರಸ್ಕಾರ.
  5. 1.11.1999ರಂದು ಕರ್ನಾಟಕ ರಾಜ್ಯ ಸರ್ಕಾರದಿಂದ ‘’ರಾಜ್ಯೋತ್ಸವ ಪ್ರಶಸ್ತಿ” ಹಾಗೂ ಸನ್ಮಾನ್ಯ.
  6. 18.04.2000 ರಂದು ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ “ಕೆಂಪೇಗೌಡ ಪ್ರಶಸ್ತಿ” ಪ್ರಧಾನ.
  7. 2002ರಲ್ಲಿ ಶ್ರವಣಬೆಳಗೊಳದ ಶ್ರೀಮಠದಿಂದ “ವರ್ಧಮಾನ ಮಹಾವೀರ ಪ್ರಶಸ್ತಿ’’.
  8. ರುದ್ರಪಟ್ಟಣದ ಸಂಗೀತಗಾರರಿಂದ ‘’ಶೇಷ್ಠ ಸಾಹಿತ್ಯ ಸಾಧಕ’’ ಪ್ರಶಸ್ತಿ ಮತ್ತು ಸನ್ಮಾನ(2008 ಮೇ)

ಅಂತರ ರಾಷ್ಟ್ರೀಯ ಪುರಸ್ಕಾರಗಳು

     ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ದೇಶ-ವಿದೇಶಗಳಿಂದ ಮನ್ನಣೆ.

  1. ಅಮೆರಿಕನ್ ಬಯಾಗ್ರಪಿಕಲ್ ಸೆಂಟರ್‍(ಯು.ಎಸ್.ಎ.ಯ) ಅವರಿಂದ ಹೊರಬಂದಿರುವ ಉದ್ರ‍್ರಂತ 1992/93- Most admired Men and Womed of the year-Annual Poll” ನಲ್ಲಿ ಐದು ನೂರು ಜನ ವಿಶ್ವ ಪ್ರತಿಭಾವಂತರ ಪಟ್ಟಿಯಲ್ಲಿ ‘’ಕನ್ನಡದ ಜನಪ್ರಿಯ ಕವಿಯ ವಿಶಿಷ್ಟ ಉಲ್ಲೆಖ.

         
A.B.I North Carolina (USA) ದಿಂದ ದಾಖಲೆ ಪತ್ರ ಹಾಗೂ ಕವಿಯ ಸಂಪೈರ್ಣ ಜೀವನ ವಿವರಗಳು ಹಾಗೂ ಸಾಧನೆಗಳು ಇಂಗ್ಲೀಷಿನಲ್ಲಿ ಪ್ರಕಟ.

  1. ಇಂಗ್ಲೆಂಡಿನ ಕೇಂಬ್ರಿಡ್ಜ್ ನಿಂದ ‘’Men of Acheievement’’  ಪ್ರಶಸ್ತಿ ಸಂಪುಟ 16ರಲ್ಲಿ ಗಮನಾರ್ಹ ಸಾಧನೆಗಳು ವೈಶಿಷ್ಟ್ಯಗಳನ್ನು ಗುರುತಿಸಿದ ದಾಖಲ ೆವಿಶ್ವಮಾನ್ಯತೆ ನೀಡಿದೆ.
  2. 1ನೇ ಆಗಸ್ಟ್ 1997ರಿಂದ ಅಮೇರಿಕನ್ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟ್ (ABI-U.S.A) ಸಂಸ್ಥೆಯವರು ಭಾರತೀಯ ಕವಿ ಡಾ.ದೊಡ್ಡರಂಗೇಗೌಡರನ್ನು ಭಾರತೀಯ ಸಲಹೆಗಾರರನ್ನಾಗಿ ನೇಮಕ ಮಾಡಿದೆ.  ಇದು ಕನ್ನಡ ಸೃಜನಶೀಲ ಲೇಖಕನಿಗೆ ಅಂತರರಾಷ್ಠ್ರೀಯ ABI   ಸಂಸ್ಥೆ ನೀಡಿದ ಗೌರವದ ಮನ್ನಣೆ ಆಗಿದೆ.
  3. ಡಾ: ದೊಡ್ಡರಂಗೇಗೌಡರು 11.11.1997ರಲ್ಲಿ ಫ್ಲಿಂಟ್ (ಯು.ಎಸ್.ಎ.) ಮಿಷಿಗನ್ ರಾಜ್ಯದಿಂದ ‘’Recognition Award” ಪಡೆದಿದ್ದಾರೆ.

 

ಕರ್ನಾಟಕ ಮಹಾನ್ ಜನತೆಯಿಂದ ದೊರೆತ ಪುರಸ್ಕಾರಗಳು

    ರಾಜ್ಯದ  ವಿವಿಧ ಜಿಲ್ಲೆಗಳ ಜನತೆ ಇವರು ನಾಡು-ನುಡಿಗಾಗಿ ಸಲ್ಲಿಸಿದ ಸೇವೆಗಾಗಿ 1972ರಿಂದಲೂ ಪುರಸ್ಕರಿಸುತ್ತಾ ಬಂದಿದೆ.  ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿವೆ.  ಕವಿಗೆ ಸೂಕ್ತ ಬಿರುದುಗಳನ್ನಿತ್ತು ಗೌರವಿಸಿದೆ.
1972ರಲ್ಲಿ ‘’ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ’’ಯಿಂದ ಇವರ ಕವನ ಸಂಕಲನ “ಕಣ್ಣು ನಾಲಗೆ ಕಡಲು’’ ಕಾವ್ಯ ಕೃತಿಗೆ ಬಹುಮಾನ ಬಂದಿದೆ.
1982ರಲ್ಲಿ ‘’ಅಖಿಲ ಕರ್ನಾಟಕ ಕನ್ನಡ ಚಲನಚಿತ್ರ ರಸಿಕರ ಸಂಘ’’ದಿಂದ  ‘’ಅರುಣರಾಗ’’ ಚಿತ್ರಕ್ಕಾಗಿ ಇವರು ಬರೆದ ವರ್ಷದ ಶ್ರೇಷ್ಠ ಸಾಹಿತ್ಯಕ ಗೀತೆ ‘’ನಾನೊಂದು ತೀರ.. ನೀನೊಂದು ತೀರ”ಕ್ಕೆ ಅತ್ಯುತ್ತಮ ಸಾಹಿತ್ತಯವೆಂದು ಪರಿಗಣಿತವಾಗಿ ಪುರಸ್ಕಾರ ದೊರೆತಿದೆ.

     1990ರಲ್ಲಿ ‘’ಕನ್ನಡ ಸಾಹಿತ್ಯ ಪರಿಷತ್ತಿ” ನಿಂದ ಇವರ ಕಾವ್ಯ ಕೃತಿ(ಪ್ರಗಾಥ ವಿಭಾಗ) ‘’ಪ್ರೀತಿ ಪ್ರಗಾಥ’’ಕ್ಕೆ ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು – ‘’ ರತ್ನಾಕರ ವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ’’ ಬಹುಮಾನ ಬಂದಿದೆ.

199ರಲ್ಲಿ ಆರ್ಯಭಟ ಸಂಸ್ಥೆಯಿಂದ ಇವರ ಭಕ್ತಿಗೀತೆ ಧ್ವನಿಸುರುಳಿ ‘ಜಯ ಎನ್ನಿ ಭೈರವಗೆ” ಕ್ಯಾಸೆಟ್ ಗಾಗಿ ಆರ್ಯಭಟ ಪ್ರಶಸ್ತಿ ಬಂದಿದೆ.

‘’ವಿಶ್ವ ಕನ್ನಡ ಸಮ್ಮೇಳನ’’ದಲ್ಲಿ ಮಹಾಕವಿ ‘’ಕುವೆಂಪು’’ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಇವರು ತಮ್ಮ ಕವಿತೆ ವಾಚನ ಹಾಗೂ ಗಾಯನ ಮಾಡಿದ್ದಾರೆ.

ಕನ್ನಡ ಚಿತ್ರರಂತದಲ್ಲಿ ಸಾಹಿತ್ಯ ಸೇವೆ
1977ರಿಂದಲೂ ದೊಡ್ಡರಂಗೇಗೌಡರು ಐದು ನೂರಕ್ಕೂ ಹೆಚ್ಚು ಕನ್ನಡ ಚಿತ್ರಗೀತೆಗಳನ್ನು ರಚಿಸಿ ಕನ್ನಡ ಜನಮನ ಗೆದ್ದು ಪ್ರೀತಿಯ ಕವಿಯಾಗಿದ್ದಾರೆ.  ಹತ್ತು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಐವತ್ತಕ್ಕೂ ಮಿಕ್ಕು ಧ್ವನಿಸುರುಳಿಗಳು ಪ್ರಕಟವಾಗಿ ಜನಪ್ರಿಯತೆಯ ಔನ್ನತ್ಯ ಪಡೆದಿವೆ.  ಒಂದು ನೂರಕ್ಕೂ ಹೆಚ್ಚು ದೂರದರ್ಶನ ಧಾರವಾಹಿಗಳಿಗ  ಶೀರ್ಷಿಕೆ ಸಾಹಿತ್ಯಕ ಗೀತೆಗಳನ್ನು ರಚಿಸಿದ್ದಾರೆ. ಜೊತೆಗೆ ಇದುವರೆಗೆ ಕೆಲವು ಕನ್ನಡ ಚಿತ್ರಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಡಾ: ದೊಡ್ಡರಮಗೇಗೌಡರ ಗೀತೆಗಳಿರುವ ಕನ್ನಡ ಚಿತ್ರಗಳು.

  1. ಪಡುವಾರಹಳ್ಳಿ ಪಾಂಡವರು
  2. ಪರಸಂಗದ ಗೆಂಡೆತಿಮ್ಮ
  3. ಬಂಗಾರದ ಜಿಂಕೆ
  4. ಅಶ್ವಮೇಧ
  5. ರಂಜಿತಾ
  6. ರಶ್ಮಿ
  7. ಪ್ರೇಮಪರ್ವ
  8. ಕೃಷ್ಣರುಕ್ಮಿಣಿ
  9. ಹೊಸನೀರು
  10. ಒಲವೇ ಬದುಕು
  11. ಆಲೆಮನೆ
  12. ಗಣೇಶನ ಮದುವೆ
  13. ಕಾವ್ಯ
  14. ಜನುಮದ ಜೋಡಿ

 

 ಮುಂತಾದ ಚಲನಚಿತ್ರಗಳಿಗೆ ಸಾಹಿತ್ಯಕ, ಭಾವನಾತ್ಮಕ, ಕಲಾತ್ಮಕ 500 ಗೀತೆಗಳನ್ನು ರಚಿಸಿ ಚಿತ್ರರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

    ಇದುವರೆಗೆ ಐವತ್ತಕ್ಕೂ ಹೆಚ್ಚು ಭಾವಗೀತೆಗಳ ಧ್ವನಿಸುರುಳಿಗಳನ್ನೂ, ಮೂವತ್ತಕ್ಕೂ ಮಿಕ್ಕು  ಭಕ್ತಿಗೀತೆಗಳ ಧ್ವನಿಸುರುಳಿಗಳನ್ನೂ ಇವರು ಹೊರತಂದಿದ್ದಾರೆ.  ಅವೆಲ್ಲವೂ ನಾಡಿನಾದ್ಯಂತ ಜನಪ್ರಿಯವಾಗಿವೆ.  ‘’ಮಾವು-ಬೇವು’’ ಮನೆಮಾತಾಗಿದೆ.  ವಿದೇಶಗಳಲ್ಲೂ ‘’ಮಾವು-ಬೇವು’’ ಲಾಂಗ್ ಪ್ಲೇ ರೆಕಾರ್ಡ್ ದಾಖಲೆ ಸೃಷ್ಟಿಸಿದೆ.

ಭಾವಗೀತೆಗಳ ಧ್ವನಿಸುರುಳಿಗಳು
ಕನ್ನಡನಾಡಿನ ಸುಗಮ ಸಂಗೀತ ಕ್ಷೇತ್ರಕ್ಕೆ-ಕವಿಯಾಗಿ, ಭಾವಗೀತಕಾರರಾಗಿ ಡಾ:ದೊಡ್ಡರಂಗೇಗೌಡರು ಕೊಡುಗೆ ಅಪಾರ.

     ಮಾವು-ಬೇವು, ಗೀತ ವೈಭವ, ಕಾವ್ಯ-ಕಾವೇರಿ, ತಂಗಾಳಿ, ಪ್ರೀತಿ-ಭಾವನೆ, ಪ್ರೇಮ-ಪಯಣ, ಹೃದಯದ ಹಕ್ಕಿ, ಹೋಳಿ-ಹುಣ್ಣೆಮೆ. ಯುಗಾದಿ, ಚೈತ್ರೋತ್ಸವ, ಮಾವು-ಮಲ್ಲಿಗೆ, ಭೂಮಿ-ಭಾನು ‘’ಸೀರಿ-ಸಂವರ್ಧನ(ಸಾಹಿತ್ಯ ಮತ್ತು ಸಂಗೀತ) ಪ್ರಮುಖ ಧ್ವನಿಸುರುಳಿಗಳು.

ಭಕ್ತಿಗೀತೆಗಳ ಧ್ವನಿಸುರುಳಿಗಳು

            ಶ್ರೀ ಆದಿಚುಂಚನಗಿರಿ ಭಕ್ತಿಗೀತೆಗಳು. ಕಾವ್ಯಾಂಜಲಿ, ಶ್ರೀ ಗುರು ಚರಣದಲ್ಲಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿ ಕುಸುಮಾಂಜಲಿ, ಭಕ್ತಿ ಶರಣಾಂಜಲಿ, ಶ್ರೀ ಸಿದ್ಧೇಶ್ವರ ಸ್ತುತಿ, ಸಪ್ತಮಾತಾ ಗೀತಾಜಂಲಿ, ಶ್ರೀ ಅಷ್ಟದೇವಿ ಗೀತಾಮಾಲಾ, ಶ್ರೀ ಹಿಮವದ್ ವೇಣುಗೋಪಾಲ ಸ್ವಾಮಿ ಭಕ್ತಿಗೀತೆಗಳು, ಶಿವಯೋಗಿ, ಭಕ್ತಿ ಕುಸುಮಾಂಜಲಿ, ಚಿರಂತನ ಚೈತನ್ಯ-ಶ್ರೀ ಗುರು ಸಂಕೀರ್ತನ ಗಂಗಾ ತರಂಗ, ‘ಚಿನ್ಮಯಿ ತಾಯಿ-ಚೌಡೇಶ್ವರಿ’ ಮುಂತಾಗಿ ಭಕ್ತಿ ಸಾಹಿತ್ಯ ವಾಹಿನಿಯನ್ನೆ ಹರಿಸಿದ್ದಾರೆ-ಡಾ; ದೊಡ್ಡರಂಗೇಗೌಡರು.

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಸದಸ್ಯತ್ವ

  1. ಸದಸ್ಯರು, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ
  2. ಕ್ರಿಯಾಶಿಲ ಸದಸ್ಯರು, ಸ್ಥಾಯಿ ಸಮಿತಿ
  3. ಗೌರವ ಸಂಪಾದಕರು, ‘’ಅನಿಕೇತನ” ಸಾಹಿತ್ಯ ತ್ರೈಮಾಸಿಕ ಪತ್ರಕೆ
  4. ಸದಸ್ರಯ, ‘’ಕನ್ನಡ ಅಭಿವೃದ್ದಿ ಪ್ರಾಧಿಕಾರ’’

ಸಾಹಿತ್ಯ, ಸಂಸ್ಕೃತಿ ಪರಿಚಾರಕರಾಗಿ ವಿದೇಶ ಪ್ರವಾಸ ಕೈಗೊಳ್ಳಲಾಗಿದೆ. ಜಯಭಾ‍ರತ್ ವಿದ್ಯಾಸಂಸ್ಥೆಯ ವತಿಯಿಂದ 1997ರಲ್ಲಿ ನೇಪಾಳ ಪ್ರವಾಸ ಮಾಡಿ, 21ದಿನಗಳ ಕಾಲ ಅಲ್ಲಿನ ಸಾಹಿತ್ಯಕ, ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

    1997ರಲ್ಲಿ ‘’ಶ್ರೀ ಆದಿಚುಂಚನಗಿರಿ ಅಂತರರಾಷ್ಟ್ರೀಯ ಶೈ್ಕಷಣಿಕ ಸಂಸ್ಥೆ “ ಫ್ಲಂಟ್-ಮಿಷಿಗನ್ (ಯು.ಎಸ್.ಎ.) ಪ್ರಾಯೋಜಕತ್ವದಲ್ಲಿ ಅಮೆರಿಕಾ, ಇಂಗ್ಲೆಂಡ್, ಜರ್ಮನಿ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ.
ಅಲ್ಲಿನ ಕನ್ನಡ ಸಂಘಟನೆಗಳಲ್ಲಿ ಧರ್ಮ ಸಂಸ್ಥೆಗಳಲ್ಲಿ ನಮ್ಮ ಕರ್ನಾಟಕದ ಹಿರಿಮೆಯನ್ನು, ಉಪನ್ಯಾಸಗಳ ಮೂಲಕ ಸಾರುತ್ತಾ, ತಮ್ಮ ಕವಿತೆಗಳನ್ನು ವಾಚಿಸುತ್ತಾ, ಹದಿನಾರು ಪ್ರಮುಖ ಪಟ್ಟಣಗಳಲ್ಲಿ ‘’ಆರ್ಟ್ ಆಫ್ ಲಿವಿಂಗ್ ಫೌಂಡೇಶನ್’’ ಮತ್ತು ‘’ಸ್ಪಿರಿಚುಯಲ್ ಯೂನಿವರ್ಸಿಟಿ’’  ಸಹಯೋಗದೊಂದಿಗೆ ಧರ್ಮ, ಸಾಹಿತ್ಯ, ಕಲೆ ಸಂಸ್ಕೃತಿ, ವಿಶ್ವಭ್ರಾತೃತ್ವ ಘನತೆಯನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ, ಪ್ರಸಾರ ಮಾಡಿದ್ದಾರೆ.
2.09.2004ರಲ್ಲಿ ಅಮೇರಿಕಾದಲ್ಲಿನ ಫ್ಲಾರಿಡಾದ ಓರ್ಲ್ಯಾಂಡೋ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ವಿಭಾಗದಿಂದ ಪ್ರತಿನಿಧಿಸಿದ್ದಾರೆ.
ಇತ್ತೇಚೆಗೆ ಕುವೆಂಪು ಗೆಳೆಯರ ಬಳಗದ ವತಿಯಿಂದ ‘’ವಿಶ್ವಮಾನವ ಪ್ರಶಸ್ತಿಯನ್ನು ಸರ್ವೆ ಕಲ್ಛರಲ್ ಅಕಾಡೆಮಿಯಿಂದ ‘’ಸಾಹಿತ್ಯಶ್ರೀ’’ ಪ್ರಶಸ್ತಿಯನ್ನು ಪಡೆದಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳಲ್ಲಿ ಉನ್ನತ ಸ್ಥಾನ ನಿರ್ವಹಣೆ

  1. 2/8/1992 ರಿಂದ ಗೌರವ ಸದಸ್ಯರು- Indian Performing Rights Society-Mumbai(IPRS)
  2. ಅಧ್ಯಕ್ಷರು, ಕರ್ನಾಟಕ ರಾಜ್ಯದ ‘’ರನ್ನ ಪ್ರಶಸ್ತಿ ಆಯ್ಕೆ ಸಮಿತಿ’’
  3. 1999-2000ರಲ್ಲಿ ಗೌರವ ತೀರ್ಪುಗಾರರು, ‘’ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ’’ ಸಮಿತಿ
  4. 1981ರಿಂದ ಸದಸ್ಯರು, ‘’ಶ್ರೀ ಲ.ನ. ಕಲೆ, ವಾಣಿಜ್ಯ ವಿಜ್ಷಾನ ಮಹಾ ವಿದ್ಯಾಲಯದ ಗೌರ್ನಿಂಗ್ ಕೌನ್ಸಿಲ್’’
  5. 1972ರಿಂದಲೂ ಸಂಪಾದಕರು ‘’ಚೈತ್ರ’’ ಸಾಹಿತ್ಯಕ ಸಂಚಿಕೆ
  6. 15.8.2003ರಿಂದ ಸದಸ್ಯರು, ಎಸ್.ಇ.ಟಿ. ಗೌರ್ನಿಂಗ್ ಕೌನ್ಸಿಲ್
  7. 1.3.2004ರಿಂದ ಸಂಪಾದಕರು, ‘’ಆದಿಚುಂಚನಗಿರಿ’’ ಹಾಗೂ ‘’ಶ್ರೀಕ್ಷೇತ್ರ’’ ಆದಿಚುಂಚನಗಿರಿ’’ ಕನ್ನಡ ಹಾಗೂ ಆಂಗ್ಲ ಭಾಷಾ ಮಾಸಪತ್ರಿಕೆ
  8. 1999ರಿಂದ 2004ರ ಫೆಬ್ರವರಿ 29ರವರೆಗೂ ಪ್ರಾಂಶುಪಾಲರು ಎಸ್.ಎಸ್.ಎಲ್.ಸಿ. ಪಿ.ಯು. ಕಾಲೇಜು

        ನಾಡಿನಾದ್ಯಂತ ಜಾನಪದ ಸಾಹಿತ್ಯ ಸಂಗ್ರಹಿಸುತ್ತಾ ಮಣ್ಣಿನ ಮಕ್ಕಳ ಮೌಲ್ಯಯುಕ್ತ ಸಾಹಿತ್ಯ ತವನಿಧಿಯ ಶೋಧದಲ್ಲಿ, ಸತತವಾಗಿ ಮಗ್ನರಾಗಿದ್ದಾರೆ.

      ಅಂಕುರ, ಶಕ್ತಿ ಕೊಡು ಪ್ರಭುವೆ, ಕಾಡು ಮಲ್ಲಿಗೆ, ಶ್ರೀ ಸನ್ನಿಧಿ, ವಾತ್ಸಲ್ಯಗೀತೆ, ಭೂಮಿ-ಭಾನು ಮುಂತಾದ ಧ್ವನಿಸುರುಳಿಗಳಲ್ಲಿ ಸ್ವತ: ಹಾಡುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಅದ ಅಪೂರ್ವ ಕಲಾತ್ಮಕ ಕಾಣಿಕೆ ನೀಡಿದ್ದಾರೆ.