ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀಮತಿ ತಾರಾ ಅನೂರಾಧ
ಕ್ಷೇತ್ರ    : ನಾಮನಿರ್ದೇಶನ ಹೊಂದಿದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ವೆಬ್ ಸೈಟ್ ವಿಳಾಸ : www.tharaanooradha.com
ತಂದೆಯ ಹೆಸರು ಶ್ರೀ ಎಂ. ತ್ಯಾಗರಾಜು
ತಾಯಿಯ ಹೆಸರು ಪುಷ್ಪ
ಜನ್ಮ ದಿನಾಂಕ 04-03-1973
ಜನ್ಮ ಸ್ಥಳ ಬೆಂಗಳೂರು
ವಿವಾಹಿತರೆ ವಿವಾಹಿತರು
ಪತಿಯ ಹೆಸರು ಶ್ರೀ ಎಸ್.ಸಿ.ವೇಣುಗೋಪಾಲ್
ಮಗ ಶ್ರೀ ಕೃಷ್ಣ
ವಿದ್ಯಾರ್ಹತೆ ಪಿ.ಯು.ಸಿ., 
ವೃತ್ತಿ ಅಭಿನಯ
ಖಾಯಂ ವಿಳಾಸ
"ಚಿಗುರು" # 278, 15ನೇ ಅಡ್ಡರಸ್ತೆ, 5ನೇ ಹಂತ,
ಜೆ.ಪಿ.ನಗರ, ಬೆಂಗಳೂರು-560078.
ದೂರವಾಣಿ ಸಂಖ್ಯೆ. (080) 26593839. 9986111155 (ಮೊ)
ಈಗಿನ ವಿಳಾಸ
-
ಹೊಂದಿರುವ ಸ್ಥಾನಮಾನಗಳು:
10-08-2012 ರಿಂದ 09-08-2018 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹವ್ಯಾಸಗಳು: ಬರವಣಿಗೆ, ಚಲನಚಿತ್ರ ವೀಕ್ಷಣೆ

ಇತರೆ ಮಾಹಿತಿ:

 

 

 

 

 

 

 

 

1986

 

2005-06

 

 

 

 

 

2012-2015

ರಾಷ್ಟ್ರ ಪ್ರಶಸ್ತಿ 5, ರಾಜ್ಯ ಚಲನಾಚಿತ್ರ ಪ್ರಶಸ್ತಿ.

ಆಂಧ್ರ ಮತ್ತು ತಮಿಳುನಾಡು ರಾಜ್ಯ ಪ್ರಶಸ್ತಿ.

ಕನ್ನಡ ರಾಜ್ಯೋತ್ಷವ ಹಾಗೂ ಇತರ ಹಲವಾರು ಪ್ರಶಸ್ತಿಗಳ ಪುರಸ್ಕೃತರು.

ಬೆಂಗಳೂರು ಮೊದಲನೆಯ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಬಿ.ನಾರಾಯಣಸ್ವಾಮಿಯವರ ಮೊಮ್ಮಗಳಾದ ತಾರಾರವರು ಆಗ್ರೋ ಕೈಗಾರಿಕಾ ನಿಗಮದಲ್ಲಿ ಮುಖ್ಯ ಕಾರ್ಯವ್ಯವಸ್ಥಾಪಕರಾಗಿದ್ದ ಶ್ರೀ ಎಂ.ತ್ಯಾಗರಾಜು ಹಾಗೂ ಪುಷ್ಟರವರ ಹೆಮ್ಮೆಯ ಪುತ್ರಿ ಕುಟುಂಬದವರಿಂದ ಪ್ರೇರೇಪಿತರಾಗಿ ತಾರಾರವರೂ ಸಹ ಸಮಾಜ ಸೇವೆ ಸಲ್ಲಿಸುವ ಕಳಕಳಿ ಹೊಂದಿದ್ದರು.

ಭರತನಾಟ್ಯದಲ್ಲಿ ಪ್ರವೀಣ್ಯತೆ, ಕೂಚಿಪುಡಿ ಸಾಂಪ್ರದಾಯಿಕ ನೃತ್ಯದಲ್ಲಿ ಡಿಪ್ಲೋಮೋ. ಚಲನ ಚಿತ್ರೋದ್ಯಮದಲ್ಲಿ ಛಾಯಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಹೆಸರಾಂತ ಶ್ರೀ ಹೆಚ್.ಸಿ.ವೇಣುಗೋಪಾಲ್ ರವರ ಪತ್ನಿ. ಇವರೂ ಕೂಡ ಹಲವಾರು ಪ್ರಶಸ್ತಿ ವಿಜೇತರು.

"ತುಳಸಿದಳ" ಚಿತ್ರದ ಮೂಲಕ ಬಾಲ ನಟಿಯಾಗಿ ಚಲನಚಿತ್ರ ರಂಗ ಪ್ರವೇಶ. ಅಲ್ಲಿಂದೀಚೆಗೆ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಿವಿಧ, ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯ. ಹಲವಾರು ಶ್ರೇಷ್ಠ ನಟಿ, ಪೋಷಕ ನಟಿ ಪುರಸ್ಕೃತರು. ಹಲವಾರು ಬಾರಿ ಚಲನಚಿತ್ರಗಳ ಪ್ರಶಸ್ತಿ ಪಡೆದ ಕೀರ್ತಿ.

ರಾಷ್ಟ್ರ ಪ್ರಶಸ್ತಿ ಪುರಸ್ಕಾರ "ಹಸೀನಾ" ಚಿತ್ರದ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ ಪ್ರಧಾನ. 75 ವರ್ಷಗಳ ಕನ್ನಡ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ನಟನೆಯನ್ನೇ ಬದುಕನ್ನಾಗಿ ಮಾಡಿಕೊಂಡ ಪ್ರಪ್ರಥಮ ಕನ್ನಡ ಕಲಾವಿದೆಯಾದ ಇವರಿಗೆ 2005-06ರಲ್ಲಿ "ಹಸೀನಾ" ಚಿತ್ರದಲ್ಲಿನ ಇವರ ಅಮೋಘ ಅಭಿನಯಕ್ಕಾಗಿ "ಶ್ರೇಷ್ಠ ನಟಿ" ಎಂದು ಪರಿಗಣಿಸಿ, ಅಂದಿನ ರಾಷ್ಟ್ರಪತಿಗಳಾದ ಡಾ. ಅಬ್ದುಲ್ ಕಲಾಂರವರು "ರಾಷ್ಟ್ರ ಪ್ರಶಸ್ತಿ" ನೀಡಿ ಗೌರವಿಸಿರುವುದು ರಾಜ್ಯದ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯ. ಇವರಿಗೆ ರಾಷ್ಟ್ರ ಪ್ರಶಸ್ತಿ ದೊರೆತ ಸಂದರ್ಭದಲ್ಲಿ, ಇಡೀ ರಾಜ್ಯದಲ್ಲಿ ಸಂಘ ಸಂಸ್ಥೆಗಳು, ಸರ್ಕಾರ ಹಾಗೂ ಜನತೆ ವಿಜಯೋತ್ಸವವನ್ನು ಹಬ್ಬದಂತೆ ಆಚರಿಸುವುದು ಜನತೆಗೆ ಇವರ ಮೇಲಿರುವ ಅಭಿನಯದ ಹತ್ತು ಹಲವಾರು ಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದು ಇವರ ಕೀರ್ತಿಗೆ ಪುಷ್ಟಿಯನ್ನು ಕೊಡುತ್ತಾ ಬಂದಿದೆ.

ಕರ್ನಾಟಕ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ "ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ" ಸ್ಥಾನವನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ.

 

ಚಲನಚಿತ್ರೋದ್ಯಮದಲ್ಲಿನ ಸಾಧನೆಗಗಳು:

 

 

 

1988-89

 

1990-91

1990-91

 

1993-94

2000-01

 

2003

2005-06

 

2006-07

 

2007-08

2007-08

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿನ ಹಲವಾರು ಪಾತ್ರಗಳಿಗೆ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಸರ್ಕಾರಗಳ ರಾಜ್ಯ ಪ್ರಶಸ್ತಿ, ಫಿಲಂಫೇರ್ ಹಾಗೂ ಇತರ ಪ್ರಶಸ್ತಿಗಳನ್ನು ಪಡೆದ ಕೀರ್ತಿ.

ದೂರದರ್ಶನದ ವಿವಿಧ ವಾಹಿನಿಗಳಲ್ಲಿನ ಹಲವಾರು ಧಾರವಾಹಿಗಳ ನಿರ್ಮಾಣ ಹಾಗೂ ಅಭಿನಯ. ರಾಜ್ಯಾದ್ಯಂತ ಅಸಂಖ್ಯಾತ ಸಂಘ, ಸಂಸ್ಥೆಗಳಿಂದ ಹಲವಾರು ಬಾರಿ ಪ್ರಶಸ್ತಿ ಪ್ರಧಾನ.

'ಎಂಗಯಂ ಒರು ಗಂಗೆ' ತಮಿಳು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಮೊಟ್ಟಮೊದಲ ಚಿತ್ರಕ್ಕೆ ತಮಿಳುನಾಡು ಸರ್ಕಾರದಿಂದ ಪ್ರಶಸ್ತಿ ಪ್ರಧಾನ

"ಮಾ ಇಂಟಿ ಕಥಾ" ತೆಲಗು ಚಿತ್ರದಲ್ಲಿ ಅಭಿನಯಕ್ಕೆ ಆಂಧ್ರ ಪ್ರದೇಶ ಸರ್ಕಾರದಿಂದ ಪ್ರಶಸ್ತಿ ಪ್ರಧಾನ

"ಕರ್ಮ" ಕನ್ನಡ ಚಿತ್ರದಲ್ಲಿ ಅಮೋಘ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ (ನಂದಿ ಪ್ರಶಸ್ತಿ)

"ಮುಂಜಾನೆಯ ಮಂಜು" ಕನ್ನಡ ಚಲನಚಿತ್ರದಲ್ಲಿನ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ

"ಕಾನೂನು ಹೆಗ್ಗಡತಿ" ಕನ್ನಡ ಚಲನಚಿತ್ರದಲ್ಲಿನ ಅಭಿನಯಕ್ಕೆ ರಾಜ್ಯದ, ಫ್ರಾನ್ಸ್ ದೇಶದ ಪ್ರಶಸ್ತಿ, ಫಿಲಂಫೇರ್, ತರಂಗಿಣಿ, ವಿಡಿಯೋಕಾನ್ ಹಾಗೂ ಇತರ ಹಲವಾರು ಪ್ರಶಸ್ತಿಗಳಿಸಿದ ಹೆಗ್ಗಳಿಕೆ.

ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

"ಹಸೀನಾ" ಚಿತ್ರದ ಅಮೋಘ ಅಭಿನಯಕ್ಕಾಗಿ "ಶ್ರೇಷ್ಠ ನಟಿ" ಎಂದು ಗುರುತಿಸಿ ರಾಷ್ಟ್ರಪತಿಗಳಿಂದ ರಾಷ್ಟ್ರ ಪ್ರಶಸ್ತಿ ಪ್ರಧಾನ. ಯು ಎ ಇ ನಲ್ಲಿ ಪ್ರದರ್ಶನಗೊಂಡ ಏಕೈಕ ಕನ್ನಡ ಚಿತ್ರ ಇದಾಗಿದೆ

"ಸೈನೈಡ್" ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಶ್ರೇಷ್ಠ ನಟಿ ಎಂದು ಪರಿಗಣಿಸಿ, ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪ್ರಧಾನ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಪ್ರತಿಷ್ಟಿತ ಎನ್.ಟಿ.ಆರ್. ಪ್ರಶಸ್ತಿ ವಿತರಣೆ.

"ಈ ಬಂಧನ" ಚಿತ್ರದಲ್ಲಿನ ನಟನೆಗೆ ಫಿಲಂ ಫೇರ್ ಪ್ರಶಸ್ತಿ.

ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಳು
1993-94

1.12 ವರ್ಷದೊಳಗಿನ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಿ ಸುಮಾರು 45ಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಕಿ, ಒಳ್ಳೆಯ ಭವಿಷ್ಯ ನೀಡಿದ ಸಾರ್ಥಕತೆ.

2. ಜೆ.ಪಿ. ನಗರ, ಕಾಕ್ಸ್ ಟೌನ್ ಹಾಗೂ ಹಲವಾರು ಕೊಳಚೆ ಪ್ರದೇಶಗಳಲ್ಲಿನ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ನೋಟ್ ಬುಕ್ ಇತ್ಯಾದಿ ಪರಿಕರಗಳನ್ನು ಪ್ರತಿ ವರ್ಷ ವಿತರಿಸುತ್ತಿರುವುದು. ಹಿರಿಯರಿಗೆ ಕಂಬಳಿ, ಸೀರೆ ಇತ್ಯಾದಿ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು.

3. ಕೊಳಚೆ ಪ್ರದೇಶದ ಹೆಣ್ಣು ಮಕ್ಕಳಿಗೆ ನೃತ್ಯ ಹಾಗೂ ಹಾಡುಗಾರಿಕೆಯನ್ನು ಕಲಿಸಿ, ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು.

4. ನಿರಂತರವಾಗಿ ರಕ್ತದಾನ ಮಾಡುತ್ತಿರುವುದು. ಇದರ ಜೊತೆಗೆ ನೂರಾರು ಉಚಿತ ರಕ್ತದಾನ. ನೇತ್ರದಾನ, ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುತ್ತಿರುವುದು. ಆಸ್ಪತ್ರೆಗಳಲ್ಲಿನ ಬಡರೋಗಿಗಳಿಗೆ ಔಷಧ, ಹಣ್ಣು ವಿತರಿಸುತ್ತಿದ್ದು, ಕಡು ಬಡ ರೋಗಿಗಳಿಗೆ ಹಣಕಾಸಿನ ನೆರವು ಹಾಗೂ ಸಾಂತ್ವಾನ ನೀಡುತ್ತಿರುವುದು.

5. ಎಸ್.ಓ.ಎಸ್. ಮಕ್ಕಳಿಗಾಗಿ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿರುವುದು.

6. ರಮಣ ಮಹರ್ಷಿ ಅಂಧ ಮಕ್ಕಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿರುವುದು.

7.ಹಲವಾರುದೇವಸ್ಥಾನಗಳ ನಿರ್ಮಾಣಕ್ಕೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತಿರುವುದು.

8. ಸ್ವಂತ ಊರಿನಲ್ಲಿ (ಚಿಕ್ಕ ಹೊಸಳ್ಳಿ, ಆನೇಕಲ್ ತಾಲ್ಲೂಕು) ತಮ್ಮ ಸ್ವಂತ ಎರಡು ಎಕರೆ ಜಮೀನಿನಲ್ಲಿಶಾಲೆಯನ್ನು ನಿರ್ಮಿಸಿ ಸರ್ಕಾರಕ್ಕೆ ಶಾಲೆ ನಡೆಸಲು ನೀಡಿರುವುದು.

9. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ ಅವರಿಗೆ ಬೇಕಾದ ಕ್ರೀಡಾ ಪರಿಕರಗಳನ್ನು ಒದಗಿಸುತ್ತಿರುವುದು.

10. ಹಲವಾರು ಕಿರು ಚಿತ್ತಗಳನ್ನು ನಿರ್ಮಿಸಿ ಬಾಲ ಕಾರ್ಮಿಕರ ಸಮಸ್ಯೆ, ವರದಕ್ಷಿಣೆ ಪಿಡುಗು, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳ ಬಗ್ಗೆ ಪ್ರತಿಬಿಂಬಿಸಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಲು ಸತತ ಪ್ರಯತ್ನ.

11. ಇತ್ತೀಚಿಗೆ ಭಾರಿ ಮಳೆಯಿಂದ ನಿರಾಶ್ರಿತರಾದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಲಿಸುವಲ್ಲಿ ಸಕ್ರಿಯ ಪಾತ್ರ ವಹಿಸಿರುವುದು. ಎಲ್ಲಕ್ಕಿಂತ ಮಿಗಿಲಾಗಿ, ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದ ನೆರೆಸಂತ್ರಸ್ತರ ಪುನರ್ವಸತಿಗಾಗಿ ಸ್ವತಃ ಬೀದಿ ಬೀದಿಗಳಿಗೆ ಹಾಗೂ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಹಣವನ್ನು ಸಂಗ್ರಹಿಸಿ ಸನ್ಮಾನ್ಯ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಿರುವುದು ನಿಜಕ್ಕೂ ಸ್ತುತ್ಯಾರ್ಹವಾದುದು.

12. ಬಾಲ್ ಬ್ಯಾಟ್ ಮಿಂಟನ್, ಥ್ರೋಬಾಲ್, ಕೇರಂ ಇತ್ಯಾದಿ ಕ್ರೀಡೆಗಳಲ್ಲಿ ಸ್ವತಃ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದ ಹೆಗ್ಗಳಿಗೆ.

13. ದೂರದರ್ಶನದ ಖಾಸಗಿ ವಾಹಿನಿಯಲ್ಲಿ ಒಂದು 'ರಿಯಾಲ್ಟಿ ಷೋ' ಏರ್ಪಡಿಸಿ, ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿ, ಅನೇಕ ಸಂಸಾರಗಳನ್ನು ಒಂದುಗೊಡಿಸಿದ ಸಮಾಧಾನ.

 

Top